ಎ.28 ನಗರಕ್ಕೆ ಮುಖ್ಯ ಮಂತ್ರಿ ಚಂದ್ರುಆಪ್ ಚುನಾವಣಾ ಪ್ರಚಾರ ಸಭೆ

ಬಳ್ಳಾರಿ: ನಗರದ ಗಾಂಧಿಭವನದಲ್ಲಿ ಎ.28 ರಂದು ಸಂಜೆ 6 ಗಂಟೆಗೆ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಪಕ್ಷದ ರಾಜ್ಯ ಮುಖಂಡ ಮುಖ್ಯ ಮಂತ್ರಿ ಚಂದ್ರು ಆಗಮಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವರ ಹಿರೇಮಠ ಹೇಳಿದ್ದಾರೆ.

ಇಲ್ಲಿನ ಶಾಸ್ತ್ರಿ ನಗರದಲ್ಲಿನ ಪಕ್ಷದ ಕಚೇರಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಟಿ‌ ನಡೆಸಿದ ಅವರು ಅಂದು ನಗರದ ಜನತೆ ಈ ಸಭೆಗೆ ಆಗಮಿಸಿ ಒಕ್ಷದ ಧೋರಣೆಗಳ ಬಗ್ಗೆ ಅರಿತು ಪಕ್ಷದ ಅಭ್ಯರ್ಥಿ ದೊಡ್ಡ ಕೇಶವರೆಡ್ಡಿ ಅವರಿಗೆ ಮತ ನೀಡಬೇಕೆಂದರು.

ಮೇ 5 ಅಥವಾ 6 ರಂದು ಅರವಿಂದ ಪ್ರೇಮ ವಾಲ್ ಮತ್ತು ಪಂಜಾಬ್ ಮುಖ್ಯ ಮಂತ್ರಿ ಭಗವಂತ ಸಿಂಗ್ ಮಾನ್ ಬರುವ ಸಾಧ್ಯತೆ ಇದೆ ಎಂದರು.

ರಾಜ್ಯದ 212 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಿದೆ. ಎಷ್ಟು ಅಭ್ಯರ್ಥಿಗಳು ಗೆಲಿಯಲಿದ್ದಾರೆ ಎಂಬುದನ್ನು ಹೇಳಲಾಗದು ಎಂದರು.

ಪಕ್ಷದ ಅಭ್ಯರ್ಥಿ ಕೇಶವ ರೆಡ್ಡಿ ಮಾತನಾಡಿ ನಗರದ 15 ವಾರ್ಡುಗಳಲ್ಲಿ ಪ್ರಚಾರ ಮಾಡಿದ್ದೇವೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಕಿರಣ್ ಕುಮಾರ್, ರಾಜ್ಯ ಕಾರ್ಯದರ್ಶಿ, ವಿ.ಬಿ.ಮಲ್ಲಪ್ಪ, ನಗರ ಅಧ್ಯಕ್ಷ ಜೆ.ವಿ.ಮಂಜುನಾಥ,
ಮಹಮ್ಮದ್ ಆಸಿಮ್, ಎಂ.ಮಂಜುನಾಥ್ ಮೊದಲಾದವರು ಇದ್ದರು.