ಎ.28ಕ್ಕೆ ಸಿಇಟಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ

ಸಂಜೆವಾಣಿ ನ್ಯೂಸ್
ಮೈಸೂರು.ಏ.28:- ಗೋಕುಲಂ ಮೂರನೇ ಹಂತದಲ್ಲಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇದೇ ಏಪ್ರಿಲ್ 28 ರಂದು ಬೆಳಗ್ಗೆ 10.30ಕ್ಕೆ ಸಿಇಟಿ ಬರೆದಿರುವ ಎಲ್ಲಾ ಪಿಯುಸಿ ವಿದ್ಯಾರ್ಥಿಗಳಿಗಾಗಿ ಯಾವ ವಿಭಾಗದ ವಿದ್ಯಾಭ್ಯಾಸ ಮುಂದುವರಿಸಬೇಕು, ಯಾವ ವಿಭಾಗಕ್ಕೆ ಹೆಚ್ಚಿನ ಆದ್ಯತೆ ಇದೆ ಎಂಬ ಬಗ್ಗೆ ಮಾಹಿತಿ ನೀಡಲು ಓಪನ್ ಡೇ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಡಾ.ಬಿ. ಸದಾಶಿವೇಗೌಡ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಸಣ್ಣಪುಟ್ಟ ಕಾರಣಗಳಿಂದಾಗಿ ತಾವು ಬಯಸಿದ ಕಾಲೇಜಿನಲ್ಲಿ ತಾವು ಬಯಸಿದ ಕೋರ್ಸ್ ಸಿಗದೇ ಹಲವು ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಹೀಗಾಗಿ ಇನ್ಫೋಸಿಸ್, ಇಂಟೆಲ್ ಮೊದಲಾದ ಕಂಪನಿಗಳಲ್ಲಿ ಉನ್ನತ ಸ್ಥಾನದಲ್ಲಿರುವವರು ಆಗಮಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಿದ್ದಾರೆ.
ಇದಲ್ಲದೆ, ಈ ವೇಳೆ ವಸ್ತುಪ್ರದರ್ಶನ ಸಹಾ ಇರಲಿದ್ದು, ಹೊಸ ಹೊಸ ಆವಿಷ್ಕಾರ ವಿವರಿಸಲಾಗುವುದು, ಸಿಇಟಿ ಆಪ್ಶನ್ ಎಂಟ್ರಿ ಎಂಬ ಪ್ರಾತ್ಯಕ್ಷಿಕೆ ಸಹಾ ಇರಲಿದೆ. ಉಚಿತ ಪ್ರವೇಶವಿದೆ. ವಿದ್ಯಾರ್ಥಿಗಳು, ಪೆÇೀಷಕರು ಪಾಲ್ಗೊಳ್ಳಬಹುದಾಗಿದೆ ಎಂದರು.
ಡಾ. ಮಧುಸೂದನ್, ಡಾ. ಅರುಣ್ ದೀಕ್ಷಿತ್ ಇದ್ದರು.