ಎ.26 ರಿಂದ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.22: ಮಾಜಿ ಮುಖ್ಯ ಮಂತ್ರಿ  ಸಿದ್ದರಾಮಯ್ಯ ಅವರು ಅಖಂಡ ಬಳ್ಳಾರಿ‌ ಜಿಲ್ಲೆಯಲ್ಲಿ ಪ್ರಸಕ್ತ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಎ 26,27 ಮತ್ತು 29 ರಂದು ಪಾಲ್ಗೊಳ್ಳುತ್ತಿದ್ದಾರೆ.
ಎ.26 ರಂದು ಬೆಳಿಗ್ಗೆ ಹಡಗಲಿ ಪಟ್ಟಣ,  ಮಧ್ಯಾಹ್ನ ಬಳ್ಳಾರಿ ಗ್ರಾಮೀಣ ಕ್ಷೇತ್ರದ  ಪಿ.ಡಿ.ಹಳ್ಳಿ, ಬಳಿಕ ಸಂಜೆ ಕಂಪ್ಲಿ ಮತ್ತು ರಾತ್ರಿ ಸಂಡೂರಿನಲ್ಲಿ ನಡೆಯುವ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಎ.27 ರಂದು ಬೆಳಿಗ್ಗೆ ಸಿರುಗುಪ್ಪದಲ್ಲಿ. ಎ.29 ರಂದು ಬೆಳಿಗ್ಗೆ ಕೂಡ್ಲಿಗಿ, ಮಧ್ಯಾಹ್ನ ಹರಪನಹಳ್ಳಿ ಸಂಜೆ ಬಳ್ಳಾರಿ ನಗರಲ್ಲಿ ನಡೆಯುವ ಚುನಾವಣಾ ಪ್ರಚಾರದ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.