ಎ.23 ರಂದು ನಗರಕ್ಕೆ ಅಶ್ವಾರೂಢ ಬಸವೇಶ್ವರ ಮೂರ್ತಿ

ಶಹಾಪೂರ:ಎ.3:ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಬಳಿಯಲ್ಲಿನ ವೃತ್ತದಲ್ಲಿ ಪ್ರತಿಷ್ಠಾಪಿಸಲಿರುವ ಅಶ್ವಾರೂಢ ಬಸವೇಶ್ವರರ ಮೂರ್ತಿಯನ್ನು ಇದೇ ಏಪ್ರಿಲ್ 23 ರಂದು ನಗರಕ್ಕೆ ತರುತ್ತಿರುವ ಸಂದರ್ಭದಲ್ಲಿ ಪುತ್ಥಳಿಯ ಸ್ವಾಗತ ಕಾರ್ಯಕ್ರಮ ನಡೆಸುವ ಕುರಿತು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಕೆಂಭಾವಿ ಚೆನ್ನಬಸವ ಶಿವಾಚಾರ್ಯರು ಏಪ್ರಿಲ್ 22 ರಂದು ಸೋಲಾಪುರ ದಿಂದ ಬಸವೇಶ್ವರರ ಪುತ್ಥಳಿಯನ್ನು ಕೆಂಭಾವಿಗೆ ತಂದು ನಂತರ ಅಲ್ಲಿಂದ ಹುಣಸಗಿ ಮೂಲಕ ಸಂಜೆ ನಗರದಲ್ಲಿನ ಪಂಚಾಂಗ ಮಠಕ್ಕೆ ತಂದು ನಂತರ 23 ರಂದು ಬೆಳಿಗ್ಗೆ ಪಂಚಾಂಗ ಮಠದಲ್ಲಿ ನಡೆಯಲಿರುವ ನೂರನೇ ವರ್ಷದ ಬಸವೇಶ್ವರ ಜಯಂತಿ ಆಚರಣೆಯ ಶುಸಂದರ್ಭದಲ್ಲಿ ಬಸವೇಶ್ವರ ಪುತ್ಥಳಿಗೆ ಪೂಜೆ ಸಲ್ಲಿಸಿ ಅಲ್ಲಿಂದಲೇ
ನಗರದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆಯನ್ನು ನಡೆಸಿ, ಸಂಜೆ ವೀರಶೈವ ಕಲ್ಯಾಣ ಮಂಟಪದ ಬಳಿಯಲ್ಲಿ ಪ್ರತಿಷ್ಠಾಪಿಸಲಿರುವ ಮೂಲ ಸ್ಥಳದಲ್ಲಿ ಕೂಡಿಸಿ ಲಾಗುವುದು ಎಂದು ಹೇಳಿದರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ವೀರಶೈವ ಸಮಾಜದ ತಾಲೂಕ ಅಧ್ಯಕ್ಷರಾದ ಸುರೇಶ ಸಜ್ಜನ ಅವರು ಬಸವೇಶ್ವರ ಪುತ್ಥಳಿಯನ್ನು ಕೆಂಭಾವಿ ಮತ್ತು ಹುಣಸಗಿಯಲ್ಲಿ ಭವ್ಯವಾದ ಮೆರವಣಿಗೆಯ ಮೂಲಕ ಕೂಡಿಸಲಾಗುವುದ ನಂತರದ ದಿನಗಳಲ್ಲಿ ಸುಮಾರು ಒಂದು ಲಕ್ಷ ಜನರನ್ನು ಸೇರಿಸಿ ನಾಡಿನ ಅನೇಕ ಜನ ಪೂಜ್ಯರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಮುತ್ಥಳಿಯನ್ನು ಅನಾವರಣಗೊಳಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ
ವೀರಪ್ಪ ಆವಂಟೆ, ನಾಗಣ್ಣ ಸಾಹು ದಂಡಿನ್, ಅಪ್ಪಾಸಾಹೆಬ್ ಪಾಟೀಲ್, ಮಲ್ಲಿಕಾರ್ಜುನ ಸತ್ಯಂಪೇಟೆ, ಬಸವರಾಜ ಜಮದ್ರಖಾನಿ, ಹೆಚ್.ಸಿ ಪಾಟೀಲ್, ಬಾಪುಗೌಡ ಪಾಟೀಲ್, ಬಸನಗೌಡ ಯಡಿಯಾಪುರ, ಸೂಗುರೇಶ ವಾರದ, ಸೋಮಶೇಖರ ಶಾಬಾದಿ, ಮಂಜುನಾಥ ಜಾಲಹಳ್ಳಿ, ಚಂದ್ರಶೇಖರ ಡೋಣೂರ, ವಿರೇಶ ಪಂಚಾಂಗಮಠ, ಶಿವರಾಜ ಕಲಕೇರಿ, ಡಿ.ಬಿ.ಪಾಟೀಲ್ ಮಾಲಗತ್ತಿ ಸೇ- ರಿದಂತೆ ಅನೇಕರು ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ವಿಶ್ವಗುರು ಬಸವಣ್ಣನವರ ಹಾಗೂ ಸಿದ್ದಗಂಗಾ ಶ್ರೀ ಶಿವಕುಮಾರ ಶ್ರೀಗಳ ಜನ್ಮ ದಿನಾಚರಣೆ ಅಂಗವಾಗಿ ಇಬ್ಬರು ಮಹಾತ್ಮರ ಭಾವಚಿತ್ರಗಳಿಗೆ ಪೂಜೆ
ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.ವೇದಿಕೆ ಮೇಲೆ ಕರಡಕಲ್ ಮಠದ ಶಿವಕುಮಾರ ಸ್ವಾಮೀಜಿ, ಮುಖಂಡರಾದ ಬಸವರಾಜಪ್ಪ ನಿಷ್ಠೆ ದೇಶಮುಖ, ಶಿವರಾಜಪ್ಪ ಗೋಲಗೇರಿ, ಚನ್ನಯ್ಯ ಸ್ವಾಮಿ, ಎಸ್.ಎನ್ ಪಾಟೀಲ್, ಸಂಗಣ್ಣ ಗೌಡ, ಮನೋಹರ ಜಾಲಹಳ್ಳಿ, ಮಹೇಶ ಪಾಟೀಲ್, ಪ್ರಕಾಶ ಸಜ್ಜನ್, ಜಯಲಲಿತ ಪಾಟೀಲ್ ಸೇರಿದಂತೆ ಅನೇಕ- ರಿದ್ದರು. ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಸುರಪುರ ಹಾಗೂ ಹುಣಸಗಿ ತಾಲೂಕಿನ ವೀರಶೈವ ಲಿಂಗಾಯತ ಸಮುದಾಯದ ನೂರಾರು ಜನ ಭಾಗವಹಿಸಿದ್ದರು.