
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.15: ನಗರ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಗಾಲಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ ಅವರು ಎ.17 ಸೋಮವಾರದಂದು ನಾಮಪತ್ರ ಸಲ್ಲಿಸಲಿದ್ದಾರೆಂದು ಪಕ್ಷದ ವಕ್ತಾರ ಸಂಜಯ್ ಬೆಟಗೇರಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ನಗರದ ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ವೀರನಗೌಡ ಕಾಲೋನಿಯಲ್ಲಿನ ಪಕ್ಷದ ಕಚೇರಿಯಿಂದ ಲಕ್ಷ್ಮೀ ಅರುಣ ಅವರು ಮೆರವಣಿಗೆ ಮೂಲಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಳಿಕನಾಮ ಪತ್ರ ಸಲ್ಲಿಸಲಿದ್ದಾರಂತೆ.
ನಾಮ ಪತ್ರ ವೇಳೆಯೇ ಪಕ್ಷದ ಬಲ ಪ್ರದರ್ಶನಕ್ಕೆ ಸಕಲ ರೀತಿಯಲ್ಲಿ ಸಿದ್ದತೆಗಳನ್ನು ಮಾಡಲಾಗುತ್ತಿದೆಯಂತೆ.