ಎ. 16 ರಿಂದ 22ರ ವರೆಗೆ ಮಾಣಿಕ ಗೀತಾ ಸಪ್ತಾಹ

ಹುಮನಾಬಾದ :ಎ.14:ತಾಲೂಕಿನ ಮಾಣಿಕನಗರದ ಶ್ರೀ ಮಾಣಿಕಪ್ರಭು ಸಂಸ್ಥಾನ ವತಿಯಿಂದ ಬೀದರ ನಗರದ ಸಾಯಿ ಪುಷ್ಪಾಂಜಲಿ ಕಲ್ಯಾಣ ಮಂಟಪದಲ್ಲಿ ಶ್ರೀ ಮಾಣಿಕ ಗೀತಾ ಸಪ್ತಾಹ ಎಪ್ರಿಲ್ 16 ರಿಂದ 22 ನೇ ಎಪ್ರಿಲ್ ವರೆಗೆ ಬೆಳಗ್ಗೆ 8 ರಿಂದ 11 ಗಂಟೆವರೆಗೆ ಮಹಮಂತ್ರ ಜಪ ಹಾಗೂ ಮಹಾ ಪುಜಾ, ಸಾಯಂಕಾಲ 6.30 ರಿಂದ 9 ಗಂಟೆ ವರೆಗೆ ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನದ ಪಿಠಾಧಿಪತಿಗಳಾದ ಶ್ರೀ ಜ್ಞಾನರಾಜ ಮಾಣಿಕಪ್ರಭು ಮಹಾರಾಜ ಅವರಿಂದ ಗೀತಾ ಪ್ರವಚನ ಹಮ್ಮಿಕೊಳ್ಳಲಾಗಿದೆ.

ಬೀದರ ನಗರದ ಭಕ್ತಾಧಿಗಳು ಪ್ರವಚನದ ಸದೋಪಯೋಗ ಪಡೆದು ತಮ್ಮ ಜೀವನ ಪುನೀತಗೋಳಿಸಬೇಕು ಹಾಗೂ ಬಂಧ ಭಕ್ತಾಧಿಗಳಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಬೀದರ ಮಾಣಿಕಪ್ರಭು ಸೇವಾ ಸಮಿತಿಯ ಅಧ್ಯಕ್ಷರಾದ ಬಾಬುರಾವ ಕುಲಕರ್ಣಿÀ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.