ಎ.12 ಕ್ಕೆ ಬಳ್ಳಾರಿಗೆ  ವಿಜಯೇಂದ್ರಅದ್ದೂರಿ ಸ್ವಾಗತಕ್ಕೆ ವೀರಶೈವ ಲಿಂಗಾಯತ ಮುಖಂಡರ ಸಭೆ.


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.07: ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ನಾಮಪತ್ರ ಸಲ್ಲಿಸುವ ವೇಳೆ ಪಾಲ್ಗೊಳ್ಳಲು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ರಾಘವೇಂದ್ರ ಅವರು ಬಳ್ಳಾರಿಗೆ ಆಗಮಿಸುತ್ತಿದ್ದು ಈ ಹಿನ್ನಲೆಯಲ್ಲಿ ನಿನ್ನೆ ನಗರದ ಲಿಂಗಾಯತ ಮುಖಂಡರು ಖಾಸಗಿ ಹೊಟೇಲ್ ನಲ್ಲಿ ಸಭೆ ಸೇರಿ ಚರ್ಚಿಸಿದರು.
ವಿಜಯೇಂದ್ರ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಲು  ವೀರಶೈವ ಲಿಂಗಾಯತ ಸಮುದಾಯದ ಮುಖಂಡರು. ವಿಧಾನ ಪರಿಷತ್ ಸದಸ್ಯ ಎಂ.ವೈ.ಸತೀಶ್ ಅವರ ನೇತೃತ್ವದಲ್ಲಿ ನಡೆಯಿತು.
 ಸಭೆಯಲ್ಲಿ ನಗರದ  ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಭಾಗಿಯಾಗಿದ್ದರು.
ಒಂದು ಕಡೆ ಸಭೆ ನಡೆಸಿ ಸಮುದಾಯದ ಬೆಂಬಲ ಸೂಚಿಸುವ ಬಗ್ಗೆ ವಿಜಯೇಂದ್ರ ಅವರಿಗೆ ಮನವರಿಕೆ ಮಾಡುವ ಕುರಿತು ಚರ್ಚಿಸಲಾಗಿದೆಯಂತೆ.
ಸಭೆಯಲ್ಲಿ ಡಾ.ಮಹಿಪಾಲ್, ನೀಲಕಂಠಪ್ಪ, ಮಹೇಶ್ವರಸ್ವಾಮಿ, ಷಡಕ್ಷರಿಸ್ವಾಮಿ, ಹನುಂಮತಪ್ಪ, ಗೋನಾಳ್ ರಾಜಶೇಖರಗೌಡ, ಸಂಗನಕಲ್ಲು ಹಿಮಂತರಾಜ್, ನಡವಿ ವೀರನಗೌಡ, ಗುತ್ತಿಗನೂರು ವಿರೂಪಾಕ್ಷಗೌಡ ಮೊದಲಾದವರು ಇದ್ದರು.

One attachment • Scanned by Gmail