ಎ.10 ವರೆಗೆ ಬೇಸಿಗೆ ಬೆಳೆಗೆ ನೀರು ತುಂಗಭದ್ರ ರೈತ ಸಂಘ

ಬಳ್ಳಾರಿ, ಮಾ.26: ತುಂಗಭದ್ರ ಎಡ ಮತ್ತು ಬಲದಂಡೆಯ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಬೇಸಿಗೆ ಬೆಳೆ ಸಂಪೂರ್ಣವಾಗಿ ಪಡೆಯಲು ಎ.10 ರವರೆಗೆ ನೀರು‌ ಬಿಡಲು ಸಂಬಂಧಿಸಿದ ಅಧಿಕಾರಿಗಳು ಮೌಖಿಕ ಸಮ್ಮತಿ ನೀಡಿದ್ದಾರೆಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಹೇಳಿದ್ದಾರೆ.
ಇಂದು‌ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಸಧ್ಯ 13.47 ಟಿಎಂಸಿ ನೀರು‌ ಇದೆ. ಭದ್ರಾಜಲಾಶಯದಿಂದ 1.6 ಟಿಎಂಸಿ ನೀರು ಬಿಡಿಸಿದೆ. ಅಲ್ಲಿಂದ 930 ಕ್ಯೂಸೆಕ್ ನೀರು ಬರುತ್ತಿದೆ.
ಜಿಂದಾಲ್ ಮತ್ತಿತರ ಕಾರ್ಖಾನೆಗಳಿಗೆ ನೀಡುತ್ತಿದ್ದ ನೀರಿನಲ್ಲಿ ಅರ್ಧ ಟಿಎಂಸಿ‌ಕಡಿತಗೊಳಿಸಿ ನೀರು‌ ನೀಡಲು ಅಧಿಕಾರಿಗಳು ಸಮ್ಮತಿಸಿದ್ದಾರೆಂದರು.
ಈ ಬಗ್ಗೆ ಅಧಿಕೃತ ಘೋಷಣೆ ಮಾಡಲು ಜಿಲ್ಲಾ ಉಸ್ತುವಾರಿ‌ ಸಚಿವರ ಸಹಿಗೆ ಕಳಿಸಿದೆಂದರು.
ನದಿಗೆ ನೀರು‌ ಬಿಡುತ್ತಿರುವುದು ತೆಲಂಗಾಣದ ಪಾಲಾಗಿದೆ. ಆ ನೀರನ್ನು ಕೆ.ಸಿ.ಕೆನಾಲ್ ಮೂಲಕ‌ ಪಡೆಯಲಿದ್ದಾರೆಂದರು.
ಸುದ್ದಿಗೋಷ್ಟಿ ಯಲ್ಲಿ , ಸಂಘದ ಮುಖಂಡರುಗಳಾದ ಗಂಗಾವತಿ‌ ವೀರೇಶ್, ಜಸಲಿಹಾಳ್ ಶ್ರೀಧರ್, ಕೊಂಚಿಗೇರಿ ಮಲ್ಲಮ್ಮ, ವೀರನಗೌಡ ಮೊದಲಾದವರು ಇದ್ದರು.