ಎ.10 ಬಳ್ಳಾರಿ, ಕುರುಗೋಡಿನಲ್ಲಿ  ಜೆಡಿಎಸ್ ಸಮಾವೇಶ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.07: ಜೆಡಿಎಸ್ ನ ಮುಖಂಡ, ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎ.10 ರಂದು ಮಧ್ಯಾಹ್ನ 2 ಗಂಟೆಗೆ ಗುಗ್ಗರಟ್ಟಿಯ ಕೃಷ್ಣ ಕಾಲೋನಿ ಮೈದಾನದಲ್ಲಿ ಬಹಿರಂಗ ಸಮಾವೇಶ ಹಮ್ಮಿಕೊಂಡಿದೆ.
ಇಂದು ನಗರದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಪಿ.ಎಸ್.ಸೋಮಲಿಂಗನಗೌಡ, ರಾಜ್ಯ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ ಅವರು ಜಂಟಿ ಪತ್ರಿಕಾಗೋಷ್ಟಿ ನಡೆಸಿ ಈ ವಿಷಯ ತಿಳಿಸಿದರು.
ಅಂದು ಹಿರಿಯೂರು ಮೂಲಕ ಆಗಮಿಸುವ ಕುಮಾರಸ್ವಾಮಿ ಅವರು ಬಳ್ಳಾರಿ ಸಮಾವೇಶದಲ್ಲಿ ಪಾಲ್ಗೊಂಡು ಮುನ್ನಾಬಾಯ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಿದ್ದಾರೆ. ನಂತರ ನಗರದಲ್ಲಿ ಪ್ರಚಾರ ಕಾರ್ಯ ಆರಂಭಿಸಲಿದೆಂದರು.
ಸಮಾವೇಶದಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಮುಖಂಡರಾದ ತಿಪ್ಪೆಸ್ವಾಮಿ, ವೆಂಕಟರಾವ್ ನಾಡಗೌಡ ಮೊದಲಾದವರು ಪಾಲ್ಗೊಳಲಿದ್ದಾರೆಂದರು.  
ನಂತರ ಕಂಪ್ಲಿ ಕ್ಷೇತ್ರದಲ್ಲಿ ಕುರುಗೋಡಿನ ನಾಡಗೌಡರ ಕಾಲೇಜು ಮೈದಾನದಲ್ಲಿ ಸಂಜೆ 5 ಗಂಟೆಗೆ ಬಹಿರಂಗ ಸಭೆ ಹಮ್ಮಿಕೊಂಡಿದೆಂದು ತಿಳಿಸಿದರು.
ಸಧ್ಯದಲ್ಲೇ ಬಳ್ಳಾರಿ ಗ್ರಾಮಾಂತರ ಮತ್ತು ಸಿರುಗುಪ್ಪ‌ ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ  ಮಾಡಲಿದೆಂದರು.
ಪಂಚರತ್ನ ಯೋಜನೆಗಳ‌ ಮೂಲಕ ಮತಯಾಚನೆ ಮಾಡುತ್ತಿದೆ. ಮುಸ್ಲೀಂ ಮತ ಸೆಳೆಯುವ ಮೂಲಕ ಇತರರ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಸರಿಯಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ  ನಿಯೋಜಿತ ಅಭ್ಯರ್ಥಿ ಮುನ್ನಾ ಬಾಯ್, ಮುಖಂಡರುಗಳಾದ ಬಂಡೆಗೌಡ, ವಿಜಯಕುಮಾರ್ ಮೊದಲಾದವರು ಇದ್ದರು.