
ದೆಹಲಿ/ಮುಂಬೈ,ಫೆ.೨೮- ಟಾಟಾ ಸಮೂಹದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಈ ವರ್ಷ ಆರು ಬಾರಿ ಅಗಲದ ಎ -೩೫೦ ವಿಮಾನಗಳನ್ನು ವಾಯುಯಾನ ಸೇವೆಗೆ ಸೇರ್ಪಡೆ ಮಾಡಲು ಸಜ್ಜಾಗಿದೆ.
ಹೊಸ ವಿಮಾನಗಳ ಸೇರ್ಪಡೆಯಿಂದ ಏರ್ ಇಂಡಿಯಾ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಬಹುನಿರೀಕ್ಷಿತ ಕ್ಯಾಬಿನ್ ಸೇವೆಯನ್ನು ಶೀಘ್ರದಲ್ಲೇ ಪಡೆಯಲಿದ್ದಾರೆ ಎಂದು ಏರ್ ಇಂಡಿಯಾ ಸಿಇಒ ಮತ್ತು ಎಂಡಿ ಕ್ಯಾಂಪ್ಬೆಲ್ ವಿಲ್ಸನ್ ಹೇಳಿದ್ದಾರೆ.
೭೦ ಶತಕೋಟಿ ಡಾಲರ್ ಮೊತ್ತದಲ್ಲಿ ಇದೇ ಮೊದಲ ಬಾರಿಗೆ ಏರ್‌ಬಸ್ ಮತ್ತು ಬೋಯಿಂಗ್ ವಿಶಾಲ ಮತ್ತು ಕಿರಿದಾದ ದೇಹಗಳ ಮಿಶ್ರಣವಾಗಿರುವ ೪೭೦ ವಿಮಾನಗಳಿಗೆ ಅದರ ದಾಖಲೆಯ ಆರ್ಡರ್‌ನ ಪಟ್ಟಿ ಬೆಲೆ ದೃಢಪಡಿಸಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಐದು ಡೆಲ್ಟಾ ಬೋಯಿಂಗ್ ೭೭೭ ವಿಮಾನಗಳು ಉತ್ತರ ಅಮೆರಿಕಾದ ಮಾರ್ಗಗಳಲ್ಲಿ ಹಾರಾಟ ಪ್ರಾರಂಭಿಸಿವೆ ನವೀಕರಿಸಲಾಗುತ್ತಿರುವ ೪೦ ಲೆಗಸಿ ವೈಡ್-ಬಾಡಿ ವಿಮಾನಗಳಲ್ಲಿ ಮೊದಲನೆಯದು ೨೦೨೪ ರ ಮಧ್ಯದಲ್ಲಿ ವಾಯಸೇವೆಗೆ ಸಿದ್ಧವಾಗಲಿವೆ ಎಂದಿದ್ದಾರೆ.
“ಏರ್ ಇಂಡಿಯಾ ಬಹುಶಃ ವಾಯುಯಾನ ಇತಿಹಾಸದಲ್ಲಿ ಅತ್ಯಂತ ದೊಡ್ಡ ರೂಪಾಂತ ಪ್ರಾರಂಭಿಸಿದೆ” ಎಂದು ಹೇಳಿದ ಅವರು ಖಾಸಗೀಕರಣದ ನಂತರದ ಆರಂಭಿಕ ತಿಂಗಳುಗಳ ನಂತರ ಬದಲಾವಣೆ ಮಾಡಿದೆ ಎಂದಿದ್ದಾರೆ.
“ನಾವು ಈ ಆರ್ಡರ್ ಅನ್ನು ಹಲವಾರು ವಿಧಾನಗಳ ಮೂಲಕ ಹಣಕಾಸು ಒದಗಿಸುತ್ತೇವೆ. ಈಕ್ವಿಟಿ, ಮಾರಾಟ ಮತ್ತು ಲೀಸ್ ಬ್ಯಾಕ್ ಮತ್ತು ಇತರ ಹಣಕಾಸು ಆಯ್ಕೆಗಳು ಇರುತ್ತವೆ” ಎಂದು ಅವರು ಹೇಳಿದರು.
ಏರ್ ಇಂಡಿಯಾ ಜೊತೆ ವಿಲೀನ:
ವಿಸ್ತಾರಾ ಜೊತೆಗಿನ ವಿಲೀನ ಸಂಬಂದ ನಾಗರಿಕ ವಿಮಾನಾಯನ ಮಹಾನಿರ್ದೇಶನಾಲಯದೊಂದಿಗೆ ಬಾಕಿ ಇದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಏಷ್ಯಾ ಇಂಡಿಯಾದ ಏಕೀಕರಣ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
“ಗುಂಪಿನಲ್ಲಿ ಪೂರ್ಣ ಸೇವಾ ವಿಮಾನಯಾನ ಮತ್ತು ಒಂದು ಕಡಿಮೆ-ವೆಚ್ಚದ ವಿಮಾನಯಾನದೊಂದಿಗೆ ಕೊನೆಗೊಳ್ಳುವ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಷೇರುದಾರ ಸಿಂಗಾಪುರ್ ವಿಮಾನಯಾನ ಸಂಸ್ಥೆ ಹತ್ತು ವರ್ಷ ಒಡಾಟದ ನಮತರ ವಿಸ್ತಾರಾ ಟಾಟಾ ಗ್ರೂಪ್ ಮತ್ತು ಎಸ್‌ಐಎ ನಡುವಿನ ೫೧:೪೯ ಜಂಟಿ ಉದ್ಯಮವಾಗಿದೆ. ಕಳೆದ ವರ್ಷ, ಎಸ್‌ಐಎ ಮತ್ತು ಟಾಟಾ ಗ್ರೂಪ್ ಏರ್ ಇಂಡಿಯಾ ಮತ್ತು ವಿಸ್ತಾರಾ ನಡುವಿನ ವಿಲೀನವನ್ನು ಎಸ್‌ಐಎಯೊಂದಿಗೆ ವಿಲೀನಗೊಂಡ ಘಟಕದ ಶೇ. ೨೫.೧ ರಷ್ಡು ಪಾಲು ಹೊಂದಿದೆ.