ಎ.೨; ಪುತ್ತೂರುನಲ್ಲಿ ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ

ಮುಂಬಯಿ (ಆರ್‌ಬಿಐ), ಮಾ.೩೦- ಒಡಿಯೂರು ಶ್ರೀಗಳ ಜನ್ಮಷಷ್ಠ್ಯಬ್ಧ ಸಂಭ್ರಮದ ಪ್ರಯುಕ್ತ ಪೂವರಿ ಪತ್ರಿಕಾ ಬಳಗದ ನೇತೃತ್ವದಲ್ಲಿ, ಷಷ್ಠ್ಯಬ್ಧ ಪುತ್ತೂರು ತಾಲೂಕು ಸಮಿತಿ ಸಹಯೋಗದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ತುಳುನಾಡಿನ ಇತಿಹಾಸದಲ್ಲಿ ಪ್ರಥಮವಾಗಿ ನಡೆಯುವ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ ಎ.೨ರಂದು ಬೆಳಗ್ಗೆ ೮.೦೦ ಗಂಟೆಗೆ ತುಳು ಭಜನೆ ಐಸಿರದೊಂದಿಗೆ ಆರಂಭಗೊಂಡು ಉದ್ಘಾಟನಾ ಸಮಾರಂಭ, ವಿಶೇಷ ಸಂಚಿಕೆ ಬಿಡುಗಡೆ, ತುಳು ಪತ್ರಿಕೆ ಪ್ರದರ್ಶನ ಮತ್ತು ಮಾರಾಟ, ವಿಚಾರಗೋಷ್ಠಿ, ನಿನ್ನೆ-ಇಂದು-ನಾಳೆ ತುಳು ಪತ್ರಿಕೆ, ಪೂವರಿ ಸಾಹಿತ್ಯ ಪ್ರಶಸ್ತಿ ಪುರಸ್ಕಾರ, ರಸಪ್ರಶ್ನೆ ಕಾರ್ಯಕ್ರಮ, ನುಡಿ ಚಿತ್ರ ಪ್ರದರ್ಶನ, ಸನ್ಮಾನ-ಸಮಾರೋಪ ಸಮಾರಂಭದೊಂದಿಗೆ ಸಂಪನ್ನಗೊಳ್ಳಲಿದೆ.


ಬೆಳಗ್ಗೆ ಒಡಿಯೂರು ವಜ್ರಮಾತಾ ಮಹಿಳಾ ಭಜನಾ ಘಟಕ ಪುತ್ತೂರು, ರಂಗದೀಪ ತಂಡ ಪುತ್ತೂರು ಬಳಗದ ತುಳು ಭಜನೆ ಐಸಿರ ಕಾರ್ಯಕ್ರಮವನ್ನು ನ್ಯಾಯವಾದಿಗಳಾದ ಶ್ರೀ ಮಹಕಜೆ ದಂಪತಿಗಳು ಉದ್ಘಾಟಿಸುವರು.
ಒಡಿಯೂರು ಶ್ರೀಗಳ ಷಷ್ಠ್ಯಬ್ಧ ಸಂಭ್ರಮ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭವನ್ನು ಸಮಿತಿ ಗೌರವಾಧ್ಯಕ್ಷ, ಪುತ್ತೂರು ಶಾಸಕರು ಸಂಜೀವ ಮಠಂದೂರು ಉದ್ಘಾಟಿಸುವರು. ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಲಿದ್ದು ಪುತ್ತೂರು ಉಪವಿಭಾಗಾಧಿಕಾರಿ ಡಾ| ಯತೀಶ್ ಉಳ್ಳಾಲ್ ಸಮ್ಮಿಲನದ ವಿಸೇಸ ಸಂಚಿಕೆಯನ್ನು ಬಿಡುಗಡೆಗೊಳಿಸುವರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತುಳು ಪತ್ರಿಕಾ ಪ್ರದರ್ಶನವನ್ನು ಉದ್ಘಾಟಿಸುವರು. ಪುತ್ತೂರು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಗೌರವ ಉಪಸ್ಥಿತರಿದ್ದು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಆಶಯದ ನುಡಿಯೊಂದಿಗೆ ನಡೆಯಲಿದೆ.
ಮಂಗಳೂರು ಆಕಾಶವಾಣಿ ನಿವೃತ್ತ ಹಿರಿಯ ಶ್ರೇಣಿ ಉದ್ಘೋಷಕ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರಗೋಷ್ಠಿಯಲ್ಲಿ ಕಟೀಲು ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಎಸ್. ಪದ್ಮನಾಭ ಭಟ್ ಎಕ್ಕಾರು, ಮಂಗಳೂರು ಕೆನರಾ ಪ.ಪೂ.ಕಾಲೇಜ್ ಉಪನ್ಯಾಸಕ ರಘು ಇಡ್ಕಿದು ಇವರು ಪಾಲ್ಗೊಳ್ಳಲ್ಲಿದ್ದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಕಾರ‍್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಎಚ್., ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ, ಬಿ.ಐತ್ತಪ್ಪ ನಾಯ್ಕ್ ಇವರು ಗೌರವ ಉಪಸ್ಥಿತರಿರುವರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕತೆಯಲ್ಲಿ ನಡೆಯುವ ಪೂವರಿ ಸಾಹಿತ್ಯ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್, ಜಿ.ಎಲ್.ಆಚಾರ್ಯ ಜ್ಯುವೆಲ್ಸ್‌ನ ಬಲರಾಮ ಆಚಾರ್ಯ, ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಮಾಲಿಕ ಕೇಶವ ಅಮೈ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದ.ಕ. ಜಿಲ್ಲಾಧ್ಯಕ್ಷ ಪಮ್ಮಿ ಕೊಡಿಯಾಲಬೈಲ್, ಮಂಗಳೂರು ಎಂಆರ್‌ಪಿಎಲ್ ಹಿರಿಯ ವ್ಯವಸ್ಥಾಪಕ ಸೀತಾರಾಮ ರೈ ಕೈಕಾರ, ಪುತ್ತೂರು ಕಮ್ಮಾಡಿ ಗ್ರೂಪ್ ಸಂಚಾಲಕ ಡಾ| ಅಶ್ರಫ್ ಕಮ್ಮಾಡಿ, ಕುಂಬ್ರ ನಿವೃತ್ತ ಮುಖ್ಯಶಿಕ್ಷಕ ಮೂಡಂಬೈಲು ಸುಧಾಕರ ರೈ, ಪುತ್ತೂರು ಸಮಾಜ ಸೇವಕೆ ಅಮರನಾಥ್ ಗೌಡ ಇವರು ಗೌರವ ಉಪಸ್ಥಿತರಿರುತ್ತಾರೆ. ಮಧ್ಯಾಹ್ನ ರಸಪ್ರಶ್ನೆ ಕಾರ್ಯಕ್ರಮ ಮತ್ತು ಹಿರಿಯ ವಿದ್ವಾಂಸರಾದ ಡಾ| ಅಮೃತಸೋಮೇಶ್ವರ, ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಇವರ ನುಡಿಚಿತ್ರ ಪ್ರದರ್ಶನ ನಡೆಯಲಿದೆ.
ಸಾಧಕರಿಗೆ ಸನ್ಮಾನ ಮತ್ತು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತುಳು ಸಿನಿಮಾ ನಿರ್ಮಾಪಕ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕಡಂದಲೆ ಸುರೇಶ್ ಭಂಡಾರಿ ಮುಂಬಯಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪೂವರಿ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಪ್ರಾಸ್ತವಿಕ ನುಡಿಯೊಂದಿಗೆ ಆರಂಭವಾಗುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಚೆನ್ನೈ ಐನಾವರ ಕನ್ನಡ ಸಂಘದ ಅಧ್ಯಕ್ಷ ವಸಂತ ಎಸ್.ಹೆಗ್ಡೆ, ಪುಣೆ ಕ್ಯಾಬಿನೆಟ್ ಸಿಸ್ಟಮ್ಸ್ ಆಂಡ್ ಕಂಟ್ರೋಲ್ಸ್ ಪ್ರೈ.ಲಿ., ಬೆಂಗಳೂರು ಸೌಂದರ್ಯ ಎಜುಕೇಶನ್ ಟ್ರಸ್ಟ್ ಸಂಚಾಲಕ ಪಿ.ಮಂಜಪ್ಪ, ಪುತ್ತೂರು ಸುದಾನ ವಸತಿಯುತ ಶಾಲೆ ಸಂಚಾಲಕ ರೆ| ವಿಜಯ ಹಾರ್ವಿನ್, ಪುತ್ತೂರು ಅಕ್ಷಯ್ ಗ್ರೂಪ್ಸ್‌ನ ಜಯಂತ ನಡುಬೈಲು, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್‌ಕುಮಾರ್ ನಾಳ ಇವರು ಪಾಲ್ಗೊಳ್ಳುವರು.
ಮಂಗಳೂರು ಆಕಾಶವಾಣಿ ನಿವೃತ್ತ ನಿಲಯ ನಿರ್ದೇಶಕ ಡಾ| ವಸಂತ ಕುಮಾರ್ ಪೆರ್ಲ ಸಮಾರೋಪ ಭಾಷಣ ಮಾಡಲಿದ್ದು ತುಳು ಪತ್ರಿಕಾ ಕ್ಷೇತ್ರದ ಸಾಧಕರಾದ ರತ್ನಕುಮಾರ್ ಎಂ., ಬಿ.ಮಾಧವ ಕುಲಾಲ್ ಬೆಂಗಳೂರು, ಎಂ.ಬಿ ಸಾಮಗ ದೆಹಲಿ, ಪೇರೂರು ಜಾರು, ಡಾ| ಗಣನಾಥ ಶೆಟ್ಟಿ ಎಕ್ಕಾರು, ಮ. ವಿಠಲ ಪುತ್ತೂರು, ದೇವದಾಸ ಸಾಲ್ಯಾನ್ ಮುಂಬಯಿ, ವೇದವ್ಯಾಸ ಭಟ್ ಕೋಟೆಕಾರು, ಬಿ.ಪಿ ಶೇಣಿ ಕಾಸರಗೋಡು, ಬಿ.ಎಂ.ಕೆ ವಾಸು ರೈ ಕೊಡಗು, ಜಯ ಮಣಿಯಂಪಾರೆ ಕಾಸರಗೋಡು, ಜಯಂತಿ ಎಸ್.ಬಂಗೇರ ಮೂಡಬಿದ್ರೆ, ಸುಧಾಕರ ದೇವಾಡಿಗ, ಎಸ್.ಆರ್ ಬಂಡಿಮಾರ್ ಮತ್ತು ಉಮೇಶ್ ರಾವ್ ಎಕ್ಕಾರು ಇವರು ಸನ್ಮಾನ ಪಡೆಯುವರು.
ಪತ್ರಿಕಾ ಗೋಷ್ಠಿಯಲ್ಲಿ ಒಡಿಯೂರು ಶ್ರೀಗಳ ಷಷ್ಠ್ಯಬ್ಧ ಸಂಭ್ರಮ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನಾ ಸಮಿತಿ ಸಂಚಾಲಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ಸಹಸಂಚಾಲಕ ಮಹೇಶ್ ಕೆ.ಸವಣೂರು, ಸದಸ್ಯ ಕಲಾವಿದ ಕೃಷ್ಣಪ್ಪ ಕಲ್ಲೇಗ ಮುಂತಾದವರು ಉಪಸ್ಥಿತರಿದ್ದರು.