ಎ.೧ ರಿಂದ ವಿಕಲಚೇತನರಿಗೆ ವಿಆರ್‌ಐಎಸ್ ಸಂಸ್ಥೆಗಳಿಂದ ತರಬೇತಿ

ಲಿಂಗಸುಗೂರು.ಮಾ.೨೭-ಲಿಂಗಸುಗೂರು ತಾಲ್ಲೂಕಿನ ಪ್ರತಿಯೊಂದು ಗ್ರಾಮಿಣ ಭಾಗದಲ್ಲಿ ಇರುವ ಕಿವುಡ ಮತ್ತು ಮೂಕರಿಗೆ ವಿಆರ್‌ಐಎಸ್ ಸಂಸ್ಥೆಗಳಿಂದ ಉಚಿತವಾಗಿ ನುರಿತ ತರಬೇತಿದಾರರಿಂದ ೦೫ ವರ್ಷದಿಂದ ೧೮ ಹಾಗೂ ೨೫ ವರ್ಷದ ಮಕ್ಕಳಿಗೆ ಉಚಿತ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸಂಸ್ಥೆ ಮುಂದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ನಂದಿನಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಹಾಗೂ ಕಿವುಡ ಮತ್ತು ಮೂಕರಿಗೆ ಸಮಾಜದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳು ಕುರಿತು ಮಾಹಿತಿ ನೀಡುವ ಮೂಲಕ ಇಂತಹ ಜನರಿಗೆ ಮುಖ್ಯವಾಹಿನಿಗೆ ತರುವುದು ನಮ್ಮ ಆಶಯವಾಗಿದೆ.
ನಗರ ಪ್ರದೇಶದಲ್ಲಿ ಮಾತ್ರ ತರಬೇತಿ ನೀಡಲಾಗುತ್ತದೆ. ಗ್ರಾಮಿಣ ಪ್ರದೇಶದ ಜನರು ಶ್ರವಣ ಮತ್ತು ನ್ನೂನ್ನೆತೆ ಹೊಂದಿರುವ ಮಕ್ಕಳು ನಿರಂತರವಾಗಿ ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಬೆಳವಣಿಗೆ ಸಹಕಾರಿಯಾಗಲಿದೆ ಎಂದರು. ಈಗಾಗಲೇ ಬೆಂಗಳೂರಿನಲ್ಲಿ ನಮ್ಮ ಸಂಸ್ಥೆ ಯಿಂದ ಸಾರ್ವಜನಿಕ ಜೀವನದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಶ್ರವಣ ದೋಷ ಇರುವ ಮಕ್ಕಳಿಗೆ ಉಚಿತ ಉತ್ತಮ ಶಿಕ್ಷಣ ನೀಡುವ ಮುಲಕ ಸಂಸ್ಥೆ ಪ್ರಮುಖ ೪೦೦ ಕಿಂತಲುಹೆಚ್ಚಿನ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು. ಸಂಸ್ಥೆ ಪ್ರಮುಖ ಪಾತ್ರವಹಿಸಿದೆ ಲಿಂಗಸುಗೂರು ತಾಲ್ಲೂಕಿನ ಮಕ್ಕಳು ಒಂದು ತಿಂಗಳ ಕಾಲ ತರಬೇತಿ ಪಡೆದು ಕೊಳ್ಳಲು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲಿಂಗರಾಜ ಗಡಿಗಿ, ಗೀತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.