ಎ.ಸಿ ಕಚೇರಿ ಸ್ಥಳಾಂತರಕ್ಕೆ ತೀವ್ರ ವಿರೋಧ

ಕೋಲಾರ,ಆ.೧- ಪಾರಂಪರಿಕ ಇತಿಹಾಸ ಹೊಂದಿರುವ ಜಿಲ್ಲೆಯ ರೈತ ಕೂಲಿ ಕಾರ್ಮಿಕರ ಒಡನಾಡಿ ಆಗಿರುವ ಎ.ಸಿ ಕಚೇರಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸ್ಥಳಾಂತರ ಮಾಡಬಾರದು ಹಾಗೂ ತಾಲ್ಲೂಕಿನಾದ್ಯಂತ ಟೊಮೊಟೋ ಗೆ ಭಾಧಿಸುತ್ತಿರುವ ರೋಗ ನಿಯಂತ್ರಣದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರೈತ ಸಂಘದಿಂದ ಶಾಸಕರಾದ ಕೊತ್ತೂರು ಮಂಜುನಾಥ್‌ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ನಗರದ ಹೃದಯ ಭಾಗದಲ್ಲಿರುವ ಪಾರಂಪರಿಕ ಇತಿಹಾಸ ಹೊಂದಿರುವ ಎ.ಸಿ ಕಚೇರಿಯನ್ನು ದುರಸ್ತಿ ನೆಪದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಸ್ಥಳಾಂತರ ಮಾಡಿ ಜಿಲ್ಲಾ ಪಂಚಾಯತ್ ಅಧಿಕಾರಿಗಳ ನಿವಾಸ ಕಟ್ಟುವ ನಿರ್ದಾರ ಸಾರ್ವಜನಿಕ ವಿರೋದಿ ದೋರಣೆ ಆಗಿದೆ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಪ್ರಶ್ನೆ ಮಾಡಿದರು.
ಮಾರುಕಟ್ಟೆಯಲ್ಲಿ ಟೆಮೊಟೋ ಬೆಲೆ ಗಗನಕ್ಕೇರಿದ್ದರೂ ಜಿಲ್ಲಾದ್ಯಂತ ರೈತರು ಬೆಳೆದಿರುವ ಸಾವಿರಾರು ಹೆಕ್ಟರ್ ಟೆಮೋಟೋ ಬಿಂಗಿ ರೋಗಕ್ಕೆ ತುತ್ತಾಗಿ ನಾಶವಾಗಿದ್ದರೂ ಇದಕ್ಕೆ ಕಾರಣವನ್ನು ಇದುವರೆಗೂ ಅಧಿಕಾರಿಗಳು ನೀಡಿಲ್ಲ. ೩೮೦೦ ಕಂಪನಿಗಳು ೪೮೦ ಜನ ಮಾರಾಟಗಾರರು ೧೨೦೦ ಅಂಗಡಿಗಳಿದ್ದರೂ ಯಾವುದೇ ಗುಣಮಟ್ದ ಔಷಧಿ ಸಿಗದೆ ಪ್ರತಿಯೊಂದು ನಕಲಿ ಔಷಧಿಯನ್ನು ಕಂಪನಿಗಳು ನೇರವಾಗಿ ರಾತ್ರಿವೇಳೆ ರೈತರಿಗೆ ಮಾರಾಟ ಮಾಡಲು ಅಧಿಕಾರಿಗಳೇ ಕುಮಕ್ಕು ನೀಡುತ್ತಿದ್ದಾರೆ. ಅಧಿಕಾರಿಗಳ ವಿರುದ್ದ ಗಂಭೀರ ಆರೋಪ ಮಾಡಿದರು.
ಇತ್ತೀಚೆಗೆ ಟೊಮೋಟೊ ಭಾಧಿಸು ತ್ತಿರುವ ರೋಗ ನಿಯಂತ್ರಣಕ್ಕೆ ಬಾರದೆ ರೈತರು ಲಕ್ಷಾಂತರೂ ಬಂಡವಾಳ ನಷ್ಟ ಆಗುತ್ತಿದೆ. ಆದರೆ ತೋಟಗಾರಿಕೆ ಕೃಷಿ ಅಧಿಕಾರಿಗಳು ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸುವುದನ್ನು ಬಿಟ್ಟು ಪ್ರತಿಷ್ಟಿತ ಹೋಟೆಲ್‌ಗಳಲ್ಲಿ ಬುಹುರಾಷ್ಟ್ರೀಯ ಕಂಪನಿಗಳ ಹೊಸ ತಳಿಗಳನ್ನು ಬಿಡುಗಡೆ ಮಾಡುವುದರಲ್ಲಿ ತಲ್ಲೀನ ರಾಗಿ ರೈತರ ಮರಣ ಶಾಸನ ಬರೆಯುತ್ತಿದ್ದಾರೆಂದು ಶಾಸಕರಿಗೆ ಮನವರಿಕೆ ಮಾಡಿದರು.
ಜಿಲ್ಲಾ ಕಾರ್ಯದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ನೂರಾರು ವರ್ಷಗಳ ಇತಿಹಾಸವಿರುವ ಸಾವಿರಾರು ಪ್ರಕರಣಗಳ ಕೇಂದ್ರ ಬಿಂದು ಆಗಿರುವ ಎ.ಸಿ ಕಚೇರಿಯಲ್ಲಿ ಪ್ರತಿ ಗುರುವಾರ ಮತ್ತು ಶುಕ್ರವಾರ ಭೂಮಿ ಮತ್ತಿತರ ಪ್ರಕರಣಗಳ ನ್ಯಾಯಾಲಯ ಸಹ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಕಟ್ಟಡ ಶಿಥಿಲಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ಎ.ಸಿ ಕಚೇರಿಯನ್ನು ಸ್ಥಳಾಂತರ ಮಾಡಿ ಆದೇಶ ಮಾಡಿರುವುದು ಯಾವ ನ್ಯಾಯವೆಂದರು.
ನಗರಕ್ಕೆ ಹೊಂದಿಕೊಂಡಿರುವ ೬ ಕಿ.ಲೋ ವ್ಯಾಪ್ತಿಯಲ್ಲಿ ನೂರಾರು ಎಕರೆ ಸರ್ಕಾರಿ ಜಮೀನು ಬಲಾಡ್ಯರು ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆಗಳು ಕಲ್ಯಾಣ ಮಂಟಪಗಳು, ನಿರ್ಮಿಸಿಕೊಂಡಿದ್ದಾರೆ. ಅಂತಹ ಸರ್ಕಾರಿ ಒತ್ತುವರಿ ಜಮೀನನ್ನು ವಶಕ್ಕೆ ಪಡೆದು ಐಷಾರಾಮಿ ಅಧಿಕಾರಿಗಳ ಬಂಗಲೆಗಳನ್ನು ಕಟ್ಟಿಕೊಳ್ಳಲು ಜಿಲ್ಲಾಧಿಕಾರಿಗಳು ಮುಂದಾಗಲಿ ಅದನ್ನು ಬಿಟ್ಟು, ಎ.ಸಿ ಕಚೇರಿ ಸ್ಥಳಾಂತರಕ್ಕೆ ಮುಂದಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ೬ ಕಿ.ಲೋ ಅಂತರ ಇರುವ ಜೊತೆಗೆ ಜನಸಾಮಾನ್ಯರಿಗೆ, ರೈತರಿಗೆ ಪ್ರತಿ ವಿಚಾರದಲ್ಲಿ ತೊಂದರೆ ಆಗುತ್ತದೆ. ಅಧಿಕಾರಿಗಳಿಗೆ ಒಡಾಡಲು ಸರ್ಕಾರದಿಂದ ಉಚಿತವಾದ ವಾಹನ ಸೌಲಭ್ಯವಿರುವ ಜೊತೆಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದೆ.ಕಚೇರಿಯ ಅವ್ಯವಸ್ಥೆ ಹಾಗೂ ಶಿಥಿಲಗೊಂಡಿದ್ದರೆ ಸರ್ಕಾರಕ್ಕೆ ವರದಿ ನೀಡಿ ಅಬಿವೃದ್ದಿಪಡಿಸಬಹುದಿತ್ತು, ಅದನ್ನು ಬಿಟ್ಟು ಈ ರೀತಿಯ ನಿರ್ದಾರ ಸರಿಯಲ್ಲ ಇದನ್ನು ಕೈ ಬಿಡಬೇಕೆಂದು ಒತ್ತಾಯ ಮಾಡಿದರು.