ಎ.ವೆಂಕಟೇಶ್ ಕುಟುಂಬಕ್ಕೆಆದಶ೯ದಂಪತಿ ರಾಜ್ಯ ಪ್ರಶಸ್ತಿಗೆ ಆಯ್ಕೆ


ಸಂಜೆವಾಣಿ ವಾರ್ತೆ
ಕುಕನೂರು, ಮಾ.16: ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯಾ೯ಲಯದ  ಆಡಳಿತ ಸಿಬ್ಬಂದಿ ಎ.ವೆಂಕಟೇಶ್ ಅವರಿಗೆ ಕನಾ೯ಟಕ ವಿಕಾಸ ರತ್ನ  ಆದಶ೯  ದಂಪತಿ ರಾಜ್ಯ ಪ್ರಶಸ್ತಿ ಲಭಿಸಿದೆ.ಭಾರತ ರತ್ನ ಸರ್ ಇಂಜನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಬೆಂಗಳೂರು ವತಿಯಿಂದ ಮಾಚ್೯ ೧೭ರಿಂದ ೧೯ ರವರೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆಯುವ ಅಖಿಲ ಕನಾ೯ಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ೧೧ ನೆಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಏ.ವೆಂಕಟೇಶ್ ಅವರು ಶಿಕ್ಷಣ ಇಲಾಖೆ ಯಲ್ಲಿ ಹಲವು ವರುಷ ಗಳ ಕಾಲ ಕಾಯಾ ವಾಚಾ ಮನದಿಂದ ಸೇವೆ ಗೈಯುತ್ತಿರುವುದನ್ನು ಗಮನಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ  ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.