ಎ.ಬಿ.ವಿ.ಪಿ. ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ಬೀದರ್: ಜು.27:ನಗರದ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಎ.ಬಿ.ವಿ.ಪಿ. ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖರಾದ ಯೋಗೇಶ ಎಂ.ಬಿ. ಮಾತನಾಡುತ್ತ, ಭಾರತ ದೇಶದ ಹೆಮ್ಮೆಯ ವೀರ ಯೋಧರು ಅಪ್ರತಿಮ ಹೋರಾಟ, ತ್ಯಾಗ, ಬಲಿದಾನದಿಂದ ಭಾರತ ದೇಶವು ಸರಿ ಸುಮಾರು 2 ತಿಂಗಳ ಯುದ್ಧದಲ್ಲಿ ನೂರಾರು ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿರುತ್ತಾರೆ ಎಂದರು.

ಭಾರತದಲ್ಲಿ ಪ್ರತಿ ಜುಲೈ 26 ರಂದು ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ವೀರರನ್ನು ಸ್ಮರಿಸಲಾಗುತ್ತದೆ, ಆ ಯುದ್ಧದಲ್ಲಿ ಪಾಕಿಸ್ತಾನಿ ಪಡೆಗಳನ್ನು ಉತ್ತರ ಕಾರ್ಗ್ ಜಿಲ್ಲೆಯ ಪರ್ವತದ ಮೇಲಿನ ಸ್ಥಾನಗಳಿಂದ ಹೊರ ಹಾಕಿದ್ದಕ್ಕಾಗಿ ಭಾರತವು ಪಾಕಿಸ್ತಾನದ ವಿರುದ್ಧದ ವಿಜಯ ಆಚರಿಸುತ್ತದೆ. ಈ ದಿನವನ್ನು ಭಾರತದಾದ್ಯಂತ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಚರಿಸಲಾಗುತ್ತದೆ, ಅಲ್ಲಿ ಭಾರತದ ಪ್ರಧಾನ ಮಂತ್ರಿ ಪ್ರತಿ ವರ್ಷ ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಗೌರವ ಸಲ್ಲಿಸುತ್ತಾರೆ. ಭಾರತೀಯ ಸಶಸ್ತ್ರ ಪಡೆಗಳ ಕೊಡುಗೆಗಳನ್ನು ಸ್ಮರಿಸಲು ದೇಶದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

.ಅಧ್ಯಕ್ಷತೆ ವಹಿಸಿದ ರಾಜಶೇಖರ ಮಂಗಲಗಿ ಮಾತನಾಡುತ್ತಾ, ದೇಶದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ಕೊಟ್ಟರು. ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ ಇದ್ದರು. ನಗರ ಕಾರ್ಯದರ್ಶಿ ಅಂಬ್ರೇಶ ಬಿರಾದಾರ ಸ್ವಾಗತಿಸಿ, ಪವನ ರಾಜಗೀರಾ ವಂದಿಸಿದರು.