ಎ.ಬಿ.ವಿ.ಪಿ.ಯಿಂದ ಆಕ್ಸಿಜನ್ ಚಾಲೆಂಜ್ ಅಭಿಯಾನ

ಬಳ್ಳಾರಿ, ಜೂ.08: ವಿಶ್ವ ಪರಿಸರ ದಿನದ ಪ್ರಯುಕ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವತಿಯಿಂದ ಜೂನ್ 5 ರಿಂದ ಜೂನ್ 9 ರವರೆಗೆ ಆಕ್ಸಿಜನ್ ಚಾಲೆಂಜ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ, ಅಭಿಯಾನದ ಪ್ರಯುಕ್ತ ಪ್ರತಿಯೊಬ್ಬರು 5-ಸಸಿಗಳನ್ನು ನೆಡಬೇಕು ಎಂದು ನಿರ್ಧರಿಸಲಾಗಿದೆ.
5-ಲಕ್ಷ ಸಸಿಗಳನ್ನು ನೆಡುವ ಅಭಿಯಾನವನ್ನು ಇಡೀ ರಾಜ್ಯಾದಂತ ಹಮ್ಮಿಕೊಳ್ಳಲಾಗಿದೆ. ಕರೋನ ಮಹಾಮಾರಿಯ ಸಂಧರ್ಭದಲ್ಲಿ ದೇಶಾದ್ಯಂತ ಮಹಾಮಾರಿ,ಕ್ರೂರಿ ಕರೋನದಂತಹ ಸಂಧರ್ಭದಲ್ಲಿ ಸೊಂಕಿತರಿಗೆ ಆಕ್ಸಿಜನ ಕೊರೊತೆ ಉಂಟಾಗಿ ಬಹಳಷ್ಟು ಜನ ಮೃತಪಟ್ಟರು, ಆದರ ನಿಟ್ಟಿನಲ್ಲಿ ಎಬಿವಿಪಿ ಆಶ್ರಯದಲ್ಲಿ ಆಕ್ಸಿಜನ್ ಚಾಲೆಂಜ್ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಬಳ್ಳಾರಿಯಲ್ಲಿ ಜೂನ್ 5 ರಂದು ಚಾಲನೆ ನೀಡಲಾಯಿತು.
ನಾಲ್ಕನೇ ದಿನವಾದ ಇಂದು ಬಳ್ಳಾರಿ ನಗರದ ಜ್ಞಾನಾಮೃತ ಪಿ ಯು ಕಾಲೇಜಿನ ಅವರಣದಲ್ಲಿ ಸುಮಾರು 2000 ಗಿಡಗಳನ್ನು ನೆಡುವುದಕ್ಕೆ ಪ್ರಾರಂಭಿಸಿಲಾಯಿತು. ಎಂದು ಬಳ್ಳಾರಿ ಜಿಲ್ಲಾ ಸಂಚಾಲಕ ನವೀನ್ ಕುಮಾರ್. ಎ ರವರು ತಿಳಿಸಿದರು
ಈ ಸಂಧರ್ಭದಲ್ಲಿ ವಿಭಾಗ ಪ್ರಮುಖರಾದ ಡಾ||ಬಿ. ದೊಡ್ಡಬಸವನಗೌಡ, ಜ್ಞಾನಾಮೃತ ಪಿ ಯು ಕಾಲೇಜಿನ ಚೇರಮನ್ ಆದ ಡಾ||ಮಲ್ಲಿಕಾರ್ಜುನ ಗೌಡ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ|| ಯಶವಂತ್ ಶೆಟ್ಟಿ ಹಾಗೂ ಕಾಲೇಜಿನ ಸಿಬ್ಬಂದಿವರ್ಗ, ಬಳ್ಳಾರಿ ಮಹಾನಗರ ಕಾರ್ಯದರ್ಶಿ ಹೊನ್ನೂರಸ್ವಾಮಿ, ಕೆ ವೀರಭದ್ರಪ್ಪ ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.