ಎ.ಬಿ.ವಿ.ಪಿ:ವಿದ್ಯಾರ್ಥಿ ನಾಯಕರ ಸಭೆ

ಬಳ್ಳಾರಿ, ಡಿ.22: ಪ್ರತಿ ವರ್ಷದಂತೆ ಈ ವರ್ಷವು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಳ್ಳಾರಿ ಮಹಾನಗರ ಅಭ್ಯಾಸ ವರ್ಗ (ವಿದ್ಯಾರ್ಥಿ ನಾಯಕರ ಸಭೆ)ಯನ್ನು ನಗರದ ಬಾಲಭಾರತಿ ವಿದ್ಯಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳ ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಹಾಗೆ ಪ್ರತಿ ವರ್ಷದಂತೆ ನಗರದ ವಿವಿಧ ಜವಾಬ್ದಾರಿಗಳನ್ನು ನೂತನವಾಗಿ ಕಾರ್ಯಕಾರಿಣಿ ಸದಸ್ಯರನ್ನು ಘೋಷಣೆ ಮಾಡಲಾಯಿತು. ಬಳ್ಳಾರಿ ಮಹಾನಗರ ಅಧ್ಯಕ್ಷರಾಗಿ ಮಹಾಲಿಂಗನಗೌಡ, ಪ್ರಾಂಶುಪಾಲರು, ಸರ್ಕಾರಿ ಬಾಲಕಿಯರ ಕಾಲೇಜು, ಬಳ್ಳಾರಿ ರವರನ್ನು ಮರು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಶರಣಪ್ಪ, ಪ್ರಾಧ್ಯಾಪಕರು, ಎಸ್.ಜಿ.ಟಿ. ಕಾಲೇಜು, ಮಂಗಳ, ಪ್ರಾಧ್ಯಾಪಕರು, ಎ.ಎಸ್.ಎಂ. ಕಾಲೇಜು, ಶಿವಕುಮಾರ್, ಪ್ರಾಧ್ಯಾಪಕರು, ಬಿ.ಐ.ಟಿ.ಎಂ., ಡಾ. ನಾಗರಾಜ್, ಪ್ರಾಧ್ಯಾಪಕರು, ರಾವ್‍ಬಹದ್ದೂರ್ ಇಂಜಿನಿಯರಿಂಗ್ ಕಾಲಾಜು, ಪಾಟೀಲ್.ಎಸ್, ಪ್ರಾಧ್ಯಾಪಕರು, ತಾರಾನಾಥ ಕಾಲೇಜು ಇವರನ್ನು ಆಯ್ಕೆ ಮಾಡಲಾಯಿತು ಎಂದು ಬಳ್ಳಾರಿ ಜಿಲ್ಲಾ ಸಂಚಾಲಕರಾದ ನವೀನ್ ಕುಮಾರ್ ರವರು ತಿಳಿಸಿರುತ್ತಾರೆ.
ಸಮಾರಂಭದಲ್ಲಿ ವಿಭಾಗ ಪ್ರಮುಖರಾದ ಡಾ. ದೊಡ್ಡಬಸವನಗೌಡ ಹಾಗೂ ಕಲ್ಯಾಣ ಸ್ವಾಮೀಜಿ ಕಲ್ಯಾಣ ಮಠ, ಬಳ್ಳಾರಿ, ಬಳ್ಳಾರಿ ಜಿಲ್ಲಾ ಪ್ರಮುಖರಾದ ಅವಿನಾಶ್ ಜಾದವ್ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.