ಎ.ಟಿ.ಎಂ ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣ ಮೂವರ ಬಂಧನ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದಲ್ಲಿ ನ 23 ರಂದು ಬೆಳಗಿನ ಜಾವ ರಾಜಕುಮಾರ್ ರಸ್ತೆಯ, ಐಸಿಐಸಿಐ ಬ್ಯಾಂಕ್ ಎ.ಟಿ.ಎಂ ನ ಸೆಕ್ಯುರಿಟಿ ಗಾರ್ಡ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಛತ್ತೀಸ್ ಘಡದ ಮೂರು‌ ಜನರನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

ಗಾರ್ಡ್ ಬಸವರಾಜ ನಾಯ್ಕ್ (43) ಅವರನ್ನು ರಾಡ್ ಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬ್ರೂಸ್ ಪೇಟೆ ಠಾಣೆಯ ಪೊಲೀಸರೊಂದಿಗೆ ನಾಲ್ಕು ತಂಡಗಳನ್ನು ಮಾಡಿ ಕೊಲೆ ಮಾಡಿದವರ ಪತ್ತೆಗೆ ಎಸ್ಪಿ‌ ಅಡಾವತ್ ಸೂಚಿಸಿದ್ದರು.

ಛತ್ತಿಸ್ ಘಡ ಮೂಲದ ರಾಯ ಬಾಗ್ ನ ಆಜಾಧ್ ಸಿಂಗ್‌, ಆಂಗದ್ ಸಿಂಗ್ ಮತ್ತು ಜಗತ್ ಸಿಂಗ್ ಅವರು ಬಳ್ಳಾರಿ ತಾಲೂಕಿನ ಕಾರೇಕಲ್ ಗ್ರಾಮದ ಬಳಿಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಬಂದವರಾಗಿದ್ದಾರೆ. ಹೆಚ್ಚಿನ ಹಣವನ್ನು ಗಳಿಸಲು ಎಟಿಎಂ ದರೋಡೆಗೆ ಯತ್ನಿಸಿ ಈಗ ಕಂಬಿ ಎಣಿಸುವಂತೆ ಆಗಿದೆ.

ಮೂರು ಮಂದಿಯನ್ನು ಕಾರೇಕಲ್ ನಲ್ಲಿ ಬಂಧನ ಮಾಡಿದೆಂದು ಇಂದು ಸಂಜೆ
ಪತ್ರಿಕಾ ಗೋಷ್ಠಿಯಲ್ಲಿ ಎಸ್.ಪಿ. ಅಡಾವತ್ ತಿಳಿಸಿದ್ದಾರೆ.
ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ 10,ಸಾವಿರ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.