ಎ.ಜೆ.ಸದಾಶಿವ ಆಯೋಗ ಅನುಷ್ಟಾನಕ್ಕೆ ವಿರೋಧ

ಲಿಂಗಸೂಗೂರು.ಜ.೨೩- ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಚರ್ಚೆಗೆ ಒಳಪಡಿಸದೇ ಕೇಂದ್ರಕ್ಕೆ ಶಿಫಾರಸು ಮಾಡಬಾರದು ಎಂದು ಆಗ್ರಹಿಸಿ ಹೋರಾಟ ನಡೆಸಲು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಸಜ್ಜಾಗಿದೆ ಎಂದು ಬಂಜಾರ ಸಮಾಜದ ತಾಲೂಕಾ ಅಧ್ಯಕ್ಷರಾದ ಲಾಲಪ್ಪ ರಾಠೋಡ ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭೋವಿ, ಲಂಬಾಣಿ, ಕೊರಮ, ಕೊರಚ, ಅಲೆಮಾರಿ ಸಮುದಾಯಗಳ ಸ್ವಾಮೀಜಿಗಳು ಮತ್ತು ಮುಖಂಡರೆಲ್ಲರೂ ಸೇರಿ ಉಗ್ರವಾದ ಹೋರಾಟದ ರೂಪುರೇಷೆಗಳನ್ನು ಮಾಡುತ್ತೇವೆ. ನ್ಯಾ.ಸದಾಶಿವ ಆಯೋಗದ ವರದಿಯನ್ನು ಬಚ್ಚಿಟ್ಟು ರಾಜಕೀಯಮಾಡುವುದನ್ನು ನಿಲ್ಲಿಸಬೇಕು. ಸೋರಿಕೆ ಯಾಗಿರುವ ವರದಿ ಪ್ರಕಾರ, ಮೀಸಲಾತಿಯ ಆಶಯ ಮತ್ತು ಪರಿಶಿಷ್ಟರ ಏಕತೆಗೆ ಅಡ್ಡಿಯಾಗ ಬಹುದಾದ ಅನೇಕ ಅಂಶಗಳು ಇದ್ದಂತಿವೆ. ಹೀಗಾಗಿ ಏಕಮುಖವಾಗಿ ಕೇಂದ್ರಕ್ಕೆ ಶಿಪಾರಸ್ಸು ಮಾಡುವುದನ್ನು ತಡೆಹಿ ಡಿಯಬೇಕು. ತಕ್ಷಣ ಸಾರ್ವಜನಿಕ ಚರ್ಚೆಗೆ ವರದಿ ಬಿಡಬೇಕು ಸಂಬಂಧಿತ ೧೦೧ ಸಮುದಾಯಗಳಿಗೆ ವರದಿಯ ದೃಢೀಕೃತ ಪ್ರತಿ ನೀಡಿ ಆಕ್ಷೇಪಣೆ ಪಡೆಯಬೇಕು. ಆ ನಂತರ ಸೂಕ್ತ ಅಧ್ಯಯನ ನಡೆಸಿ ಪರಿಶಿಷ್ಟರ ಜಾತಿಗಳ ಜನಸಂಖ್ಯಾವಾರು ಮೀಸಲಾತಿಗೆ ಶಾಸನ ರೂಪಿಸಿ ಈ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲಿ ಎಂದರು.
ಈ ಸಂದರ್ಭದಲ್ಲಿ ನಾಗರಡ್ಡಿ, ನಾಯಕ ಭೀಮಣ್ಣ ಹಿರೆಮನಿ, ನಾರಾಯಣಪ್ಪ ನಾಯ್ಕ, ದೇವರೆಡ್ಡಿ, ಹುಚೆಶ್ವರ ಭಜಂತ್ರಿ, ದೇವಪ್ಪ ರಾಠೋಡ್, ರಾಜು ಚವಾಣ್ ಶಂಕರ ಪವಾರ ಇನ್ನಿತರರು ಉಪಸ್ಥಿತರಿದ್ದರು.