ಎ.ಐ.ಟಿ.ಯು.ಸಿ. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕಾರ್ಮಿಕರ ಸಮಾವೇಶ

ಸಂಜೆವಾಣಿ ವಾರ್ತೆ
ಮಾನ್ವಿ,ಫೆ.೨೪- ರಾಜ್ಯದಲ್ಲಿನ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ರಾಜ್ಯದಲ್ಲಿನ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬದವರ ಕಲ್ಯಾಣಕ್ಕಾಗಿ ರಚಿಸಲಾಗಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ೨೦೧೭-೧೮ ನೇ ಸಾಲಿನಲ್ಲಿ ೧೬೬೦೦ ಕೋಟಿ ಸೆಸ್ ಸಂಗ್ರಹವಿತ್ತು ಉಚ್ಚನ್ಯಾಯಲಾಯದ ಅದೇಶದಂತೆ ಫಲಾನುಭವಿಗಳಿಗೆ ಪರಿಹಾರವನ್ನು ನೇರವಾಗಿ ಅವರ ಖಾತೆಗೆಳಿಗೆ ಜಮಾ ಮಾಡಬೇಕು ಎಂದು ನಿರ್ದೇಶನವಿದ್ದರು ಕೂಡ ಕೋವಿಡ್ ಸಮಯದಲ್ಲಿ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಕಿಟ್ ನೀಡುವ ನೆಪ್ಪದಲ್ಲಿ ಹೆಚ್ಚಿನ ಮೋತ್ತಕ್ಕೆ ಕಿಟ್ ಗಳನ್ನು ಖರೀದಿಸಿ ಕಾರ್ಮಿಕರಿಗೆ ನೀಡುವ ಮೂಲಕ ೮೫೦೦ ಕೋಟಿ ಹಣವನ್ನು ಖರ್ಚು ಮಾಡಲಾಯಿತು ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಾಕ್ಷರಾದ ಕಾಂ. ಹೆಚ್. ಈ. ಉಮೇಶ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯ ಸಭಾಂಗಣದಲ್ಲಿ ನಡೆದ ಎ.ಐ.ಟಿ.ಯು.ಸಿ. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಕ್ವಾರಿ ಕಾರ್ಮಿಕರ ಸಂಘಟನೆ , ಶ್ರೀ ಉದ್ಬವ ಆಂಜನೇಯ್ಯ ಎ.ಪಿ.ಎಂ.ಸಿ. ಹಮಾಲರ ಸಂಘ ತಾ.ಘಟಕವತಿಯಿಂದ ನಡೆದ ಸಮಾವೇಶದಲ್ಲಿ ಮಾತನಾಡಿ ಇಂದು ಕಲ್ಯಾಣ ಮಂಡಳಿಯಲ್ಲಿ ಕೇವಲ ೪೫೦೦ ಕೋಟಿ ಹಣ ಮಾತ್ರ ಉಳಿದಿದ್ದು ರಾಜ್ಯದಲ್ಲಿ ಇಂದು ೫೫ ಲಕ್ಷ ಕಾರ್ಡಗಳಿದ್ದು ನೈಜ ಫಲಾನುಭವಿಗಳು ೨೫ ಲಕ್ಷ ಮಾತ್ರ ಇದ್ದು ಉಳಿದ ಬೋಗಸ್ ಕಾರ್ಡದಾರರನ್ನು ಸಮೀಕ್ಷೆ ಮೂಲಕ ಪತ್ತೆ ಹಚ್ಚಿ ನಕಲಿ ಕಾರ್ಡಗಳನ್ನು ರದ್ದು ಮಾಡದೆ ಇರುವುದರಿಂದ ಹಾಗೂ ಕಲ್ಯಾಣಕಾರ್ಮಿಕ ಮಂಡಳಿಯು ಕಾರ್ಮಿಕರ ಮಕ್ಕಳಿಗೆ ನೀಡುವುದಕ್ಕೆ ಮಾರುಕಟ್ಟೆಗಿಂತಲು ಹೆಚ್ಚಿನ ಮೋತ್ತಕ್ಕೆ ಲ್ಯಾಪ್ ಟಾಪ್, ಟ್ಯಾಬ್ ,ಕ್ಯಾಲೆಂಡರ್, ಸೇರಿ ಇತರ ವತ್ತುಗಳನ್ನು ಖರೀದಿ ಮಾಡಿರುವುದರಿಂದ ಹಾಗೂ ಕಾರ್ಮಿಕರ ಸಂಚಾರಕ್ಕೆ ೬೦ ಕೋಟಿಮೀಸಲಿಡಲಾಗಿದ್ದು,ನಿವೃತ್ತಿ ವೇತನ, ಚಿಕಿತ್ಸೆ ವೆಚ್ಚ,ಸೇರಿದಂತೆ ಇತರೆ ೮೫ ಲಕ್ಷ ಅರ್ಜಿ, ೧೨ ಲಕ್ಷ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಬಾಕಿ ಇದ್ದರು ಕೂಡ ಅವುಗಳಿಗೆ ಅದ್ಯತೆ ನೀಡದಿದ್ದಲ್ಲಿ ನಮ್ಮ ಸಂಘಟನೆಗಳು ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಧರಣಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಮಾಲರ ಸಂಘದ ಅಧ್ಯಕ್ಷರಾದ ಬಾಷುಮಿಯಾ, ಪ್ರ.ಕಾರ್ಯದರ್ಶಿ ಚಂದ್ರಶೇಖರ ಕ್ಯಾತನಟ್ಟಿ, ಸಂಗಯ್ಯಸ್ವಾಮಿ ಹಿರೇಮಠ ಚಿಂಚರಕಿ, ಗೌರವಾಧ್ಯಕ್ಷರಾದ ಎಂ.ಬಿ. ಸಿದ್ದರಾಮಯ್ಯಸ್ವಾಮಿ, ತಾ.ಅಧ್ಯಕ್ಷ ಅಬ್ರಾಹಂ, ಅಂಗನವಾಡಿ ಸಂಘದ ಅಧ್ಯಕ್ಷರಾದ ಚನ್ನಮ್ಮ, ಪ್ರ.ಕಾರ್ಯದರ್ಶಿ ದೇವು ಸೇರಿದಂತೆ ಇನ್ನಿತರರು ಇದ್ದರು.