ಎ.ಎಸ್.ಎಂ ಕಾಲೇಜ್ ನಲ್ಲಿ ವಾರ್ಷಿಕ ಕ್ರೀಡಾಕೂಟ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.14: ನಗರದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯುಎಸಿ ಇವರ ಸಹಯೋಗದಲ್ಲಿ ವಾರ್ಷಿಕ ಕ್ರೀಡೆಗಳನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ.ಕುಪ್ಪಗಲ್ ಗಿರಿಜಾ ಇವರು ಆಗಮಿಸಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಗೆಯೇ ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಪ್ರಾಂಶುಪಾಲರಾದ ಡಾ.ಎಸ್.ವೈ.ತಿಮ್ಮಾರೆಡ್ಡಿ ಇವರು ಭಾಗವಹಿಸಿದರು.
ಉದ್ಘಾಟನೆಯ ನಂತರ ಅಧ್ಯಕ್ಷರು ವಿದ್ಯಾಭ್ಯಾಸ ಮತ್ತು ಕ್ರೇಡೆಗಳನ್ನು ಜೊತೆಜೊತೆಗೆ ಅಳವಡಿಸಿಕೊಳ್ಳುವುದರ ಮೂಲಕ ಅದರ ಮಹತ್ವವನ್ನು ಕುರಿತು ತಿಳಿಸಿದರು.  ನಂತರ ಸಂಸ್ಥೆಯ ವಿಕಾಸ ಮತ್ತು ಬೆಳವಣೆಗೆಯ ಬಗ್ಗೆ ಮಾತನಾಡಿದರು.  ಅವರು ಶೈಕ್ಷಣಿಕ ಸಾಲಿನ ಕ್ರೀಡೆಯ ವ್ಯವಸ್ಥೆಯ ಸಿದ್ಧತೆಯನ್ನು ಕುರಿತು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು. 
ಪ್ರಾಂಶುಪಾಲರಾದ ಡಾ.ಎಸ್.ವೈ.ತಿಮ್ಮಾರೆಡ್ಡಿಯವರು ತಮ್ಮ ಅಧ್ಯಕ್ಷತೆಯ ಭಾಷಣದಲ್ಲಿ ಕ್ರೀಡೆ ಮತ್ತು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರೆ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಬೆಳಿಸಿಕೊಳ್ಳಬಹುದು ಎಂಬ ಸಲಹೆಯನ್ನು ನೀಡಿದರು ಹಾಗೆಯೇ ನಮ್ಮ ಸಂಸ್ಥೆ ಮತ್ತು ಮಹಾವಿದ್ಯಾಲಯ ಸದಾಕಾಲದಲ್ಲಿ ವಿದ್ಯಾರ್ಥಿಗಳ ಬೆಳವಣೆಗಾಗಿ ಸಹಕಾರಿಯಾಗುತ್ತದೆ. ಈ ತರಹದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಪ್ರೋತ್ಸಾಹ ನೀಡುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 
ಈ ಕಾರ್ಯಕ್ರಮವನ್ನು ಎರಡು ದಿನಗಳವರೆಗೆ ಏರ್ಪಡಿಸಲಾಗಿತ್ತು ಇದರಲ್ಲಿ ವಾಲಿಬಾಲ್, ತ್ರೋಬಾಲ್, ಕಬ್ಬಡ್ಡಿ, ಟೆನ್ನಿಕಾಯ್ಟ್, ಷಾಟ್‍ಪುಟ್, 100 ಮೀಟರ ಓಟ, 400 ಮೀಟರ್ ರಿಲೆ, ಬ್ಯಾಡ್ಮಿಂಟನ್, ಚೆಸ್ ಈ ಸ್ಪರ್ಧೆಗಳನ್ನು ಆಯೋಜಿಲಸಾಗಿತ್ತು.
ಕುಮಾರಿ ವಿಭಾ ಕುಲಕರ್ಣಿ, ಬಿಎ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿನಿ ಹಾಗೂ ಕುಮಾರಿ ತಸ್ಲಿಮ್, ಬಿ.ಎಸ್ಸಿ. ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿನಿ ಇವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕುಮಾರಿ ಜೀನತ್, ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಈ ಕಾಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗಿತಿಸಿದರು.  ಕುಮಾರಿ ಅಮೃತ, ಬಿಸಿಎ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿನಿ ವಂದನಾರ್ಪಣೆಯನ್ನು ನಿರ್ವಹಿಸಿದರು. 
 ಸಮಾರೋಪ
ಸಮಾರೋಪ ಸಮಾರಂಭವನ್ನು ಆಯೋಜಿಸಿ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀಮತಿ ಕುಪ್ಪಗಲ್ ಗಿರಿಜ, ಪ್ರಾಂಶುಪಾಲರು ಡಾ.ಎಸ್.ವೈ.ತಿಮ್ಮಾರೆಡ್ಡಿ, ಸಂಯೋಜನಾಧಿಕಾರಿಗಳು ಡಾ.ದೂಪಂ ಸತೀಶ್, ದೈಹಿಕ ಶಿಕ್ಷಣ ಶಿಕ್ಷಕರು ಶ್ರೀ.ಜಿ.ಆಶೋಕ್, ಸಿಬ್ಬಂದಿ ವರ್ಗ, ವಿದ್ಯಾರ್ಥಿನಿಯರು ಭಾಗವಹಿಸಿ, ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾಲೇಜು ಛಾಂಪಿಯನ್ನರಾಗಿ ಬಿಎಸ್ಸಿ ವಿದ್ಯಾರ್ಥಿನಿಯರು, ಎರಡನೇ ಸ್ಥಾನದಲ್ಲಿ ಬಿ.ಕಾಂ. ವಿದ್ಯಾರ್ಥಿನಿಯರು ಹಾಗೂ ತೃತೀಯ ಸ್ಥಾನದಲ್ಲಿ ಬಿ.ಎ. ವಿದ್ಯಾರ್ಥಿನಿಯರು ಸ್ಥಾನವನ್ನು ಪಡೆದುಕೊಂಡಿದ್ದಾರೆ.