ಎ. ಎಚ್. ಶಿವಮೂರ್ತಿಸ್ವಾಮಿಯವರಿಗೆ ಶ್ರದ್ಧಾಂಜಲಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಅ.೧೨; ಪಂಡಿತ ಪುಟ್ಟರಾಜ ಗವಾಯಿಗಳ ಸೇವಾ ಸಂಸ್ಥೆಯ ಜಿಲ್ಲಾ ಘಟಕ ಹಾಗೂ ಮಹಿಳಾ ಘಟಕದಿಂದ ಗದಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಪ್ಪಜ್ಜಯ್ಯನವರ ಸಾನಿಧ್ಯದಲ್ಲಿ ಹಾಗೂ ರಾಜ್ಯ ಘಟಕದ ಅಧ್ಯಕ್ಷರಾದ  ಚೆನ್ನವೀರಯ್ಯ ಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ಬಾಡ ಕ್ರಾಸ್ ನಲ್ಲಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ  ಎ. ಎಚ್. ಶಿವಮೂರ್ತಿ ಸ್ವಾಮಿಗಳವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಅಧ್ಯಕ್ಷರಾದ  ವಿನಾಯಕ, ಉಪಾಧ್ಯಕ್ಷರಾದ  ರೇವಣಸಿದ್ದಪ್ಪ ಗುರುಗಳು, ಶಿವಮೂರ್ತಿ ಸ್ವಾಮಿ ಅವರ ಪುತ್ರಿ ಶುಕ್ಲಾ , ವೀರೇಶ್ವರ ಪುಣ್ಯಾಶ್ರಮದ ಶಿವಬಸಯ್ಯ ಚರಂತಿಮಠ, ಹಾಲೇಶ್, ಆನಂದ್ ಪಾಟೀಲ್  ಪಂಡಿತ ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ  ಸೌಮ್ಯ ಸತೀಶ್ ಉಪಾಧ್ಯಕ್ಷರಾದ  ವನಜ ಮಾಲಿಂಗಯ್ಯ, ಕಾರ್ಯದರ್ಶಿಗಳಾದ ಮಮತಾ ನಾಗರಾಜ್, ಮಧುಮತಿ ಗಿರೀಶ್, ಖಜಾಂಚಿಗಳಾದ ರಾಜಶ್ರೀ ರಾಜೇಶ್, ಶಾನ್ವಿ, ಸಂಚಾಲಕರಾದ ಶಾಂತ ಶಿವಶಂಕರ್, ಹಾಗೂ ಶಿವಮೂರ್ತಿ ಸ್ವಾಮಿ ಅವರ ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮತ್ತು ವೀರೇಶ್ವರ ಪುಣ್ಯಾಶ್ರಮದ ಮಕ್ಕಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.