ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಕಡಿತ ಪರಶುರಾಮ ಆಕ್ರೋಶ

ರಾಯಚೂರು.ಏ.೧೦.ಮೆಟ್ರಿಕ್ ನಂತರದ ವಿವಿಧ ಕೋರ್ಸುಗಳಲ್ಲಿ ಮ್ಯಾನೇಜ್ಮೆಂಟ್ ಸೀಟುಗಳನ್ನು ಪಡೆದು ಅಭ್ಯಾಸ ಮಾಡುತ್ತಿದ್ದ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳ ಕಾಲೇಜು ಶುಲ್ಕ,ವಿದ್ಯಾರ್ಥಿ ವೇತನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರವು ಕಡಿತ ಮಾದಿದ್ದು ಕೊಡಲೇ ಈ ಆದೇಶವನ್ನು ರದ್ದು ಪಡಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಪರಶುರಾಮ ಆರೋಲಿ ಅವರು ಒತ್ತಯಿಸಿದರು.
ಅವರಿಂದು ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಕಾಡು ಬಡತನದಲ್ಲಿ ಹುಟ್ಟಿದು ಇವರಿಗೆ ವಿದ್ಯಾಭ್ಯಾಸ ಮಾಡಲು ಸರ್ಕಾರ ಇವರಿಗೆ ವಿದ್ಯಾರ್ಥಿವೇತನ,ಕಾಲೇಜು ಶುಲ್ಕವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ರದ್ದು ಪಡಿಸಿ ಆದೇಶವನ್ನು ಹೊರಡಿಸಿದ್ದಾರೆ ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಬೀದಿ ಪಾಲಾಗುತ್ತಿದ್ದರೆ.
ಎಸ್ ಸಿ ವಿದ್ಯಾರ್ಥಿಗಳ ಪರವಾಗಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಎಸ್ ಟಿ ವಿದ್ಯಾರ್ಥಿಪರವಾಗಿದ್ದ ಸಮಾಜಕಲ್ಯಾಣ ಸಚಿವರಾಗಿದ್ದ ಶ್ರೀರಾಮುಲು ಅವರು ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿಲ್ಲ ಮುಖ್ಯ ಮಂತ್ರಿಗಳು ಕೇವಲ ದಲಿತರ ಮನೆಯಲ್ಲಿ ಊಟ ಮಾಡಿದರೆ ಮಾತ್ರ ದಲಿತರ ಕಷ್ಟಗಳನ್ನು ನಿವಾರಿಸಲು ಆಗುವುದಿಲ್ಲ.ದಲಿತ ವಿದ್ಯಾರ್ಥಿಗಳು ಉನ್ನತವ್ಯಾಸಂಗಕ್ಕೆ ಪೂರಕವಾಗಬೇಕು,
ಸರ್ಕಾರ ದಲಿತರ ಆರ್ಥಿಕ ನಿಧಿಯನ್ನು ಕೇವಲ ೨ಲಕ್ಷಕ್ಕೆ ಮಾತ್ರ ಸೀಮಿತವಾಗಿಸಿದ್ದಾರೆ,ಉಪಚುನಾವಣೆಯಲ್ಲಿ ಬಿಜೆಪಿ ಸರ್ಕಾರವು ದಲಿತರಿಗೆ ಮನವೊಲಿಸಿ ಮತಪಡೆಯಲು ಮುಂದಾಗುತ್ತಿದ್ದರೆ.
ಮೆಟ್ರಿಕ್ ನಂತರದ ವಿವಿಧ ಕೋರ್ಸ್ ಗಳಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಕಾಲೇಜು ಶುಲ್ಕವನ್ನು ಕಡಿತ ಮಾಡಿರುವುದರಿಂದ ನಮ್ಮ ಸಮಾಜದವರು ಬಿಜೆಪಿಗೆ ಮತ ಚಲಾಯಿಸುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶಿವಜ್ಞಾನಿ ಕಪ್ಪಗಲ್,ಹುಲಿಗೇಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.