ಎಸ್ ಸಿ ಎಸ್ ಟಿ ಅನುದಾನ ಗ್ಯಾರಂಟಿ ಯೋಜನೆಗೆ ಬಳಕೆ ಖಂಡನೆ

ಇಂಡಿ :ಆ.3: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಈ ಸಾಲಿನ ಅನುದಾನದಲ್ಲಿನ 11 ಸಾವಿರ ಕೋಟಿ ರೂಪಾಯಿ ಹಣವನ್ನು ಸರ್ಕಾರದ ಗ್ಯಾರಂಟಿ ಯೊಜನೆಗಳಿಗೆ ಬಳಸುತ್ತಿರುವುದನ್ನು ಖಂಡನಾರ್ಹ ಎಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಅಧ್ಯಕ್ಷ ವಿನೋದ ಕಾಳೆ ಹೇಳಿದರು.ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ನೀಡಿ ಮಾತನಾಡಿದ ಅವರು
ಎಸ್ ಸಿ ಎಸ್ ಟಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಮೀಸಲಿರಬೇಕಾಗಿದ್ದ ಹಣವನ್ನು ಸರ್ಕಾರದ ಗ್ಯಾರಂಟಿ ಯೊಜನೆಗಳಿಗೆ ಬಳಸುತ್ತಿರುವುದನ್ನು ಖಂಡನೀಯ. ಶೋಷಿತ ಸಮುದಾಯಗಳ ಹಕ್ಕು ಕಿತ್ತುಕೊಂಡು, ತಮ್ಮ ಘೋಷಣೆ ಯೋಜನೆಗಳಿಗಾಗಿ ನಮ್ಮ ಅನುದಾನ ಬಳಸದೆ ಈ ಸಮುದಾಯಗಳ ವಿದ್ಯಾರ್ಥಿ ಯುವಜನರ ಹಾಗೂ ನಿರುದ್ಯೋಗ ಯುವಕರ, ಮಹಿಳೆಯರ ಮಕ್ಕಳ, ರೈತ ಕೂಲಿ ಕಾರ್ಮಿಕರ, ಒಟ್ಟಾರೆ ಎಸ್ ಸಿ ಎಸ್ ಟಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು ಎಂದು ಹೇಳಿದರು. ದಲಿತ ವಿದ್ಯಾರ್ಥಿ ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಎಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಘಟಕವು ಈ ಮೂಲಕ ತಮ್ಮಲ್ಲಿ ಒತ್ತಾಯಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಆಕಾಶ್ ಹಾದಿಮನಿ, ರವಿ ಸಿಂಗೆ, ಗಂಗಾಧರ ಕಾಳೆ, ರಾಹುಲ ಮನಗೂಳಿ, ಸಂತೋಷ್ ತಳಕೇರಿ, ಪ್ರವೀಣ ಕಾಳೆ, ವಿನಾಯಕ ಕಾಳೆ, ರಾಮ ಫೆÇೀತೆ, ಸುರೇಶ ರಾಠೋಡ, ಮರೆಪ್ಪ ಹರಿಜನ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗಿಯಾಗಿದರು.