ಎಸ್ ಸಿ, ಎಸ್ಟಿಗೆ ಮೀಸಲಾತಿಯನ್ನು   ಹೆಚ್ಚಿಸಲು ಆಗ್ರಹ

ಕುಕನೂರು:ಪರಿಶಿಷ್ಟ ಜಾತಿಗೆ  ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ    ಹೆಚ್ಚಿಸಬೇಕೆಂದು ಮೇ 20 ರಂದು ತಾಲ್ಲೂಕಿನಲ್ಲಿ ಬೃಹತ್ ಪ್ರತಿಭಟನೆ  ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದು  ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷ ಮಂಗಳೇಶ ಮಂಗಳೂರು  ಹೇಳಿದರು
ಕುಕನೂರು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಮಂಗಳವಾರ ದಿವಸ ಎಸ್ಸಿ ಎಸ್ಟಿ ಮುಖಂಡರು ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೇ 15ರಂದು  ಮುಖಂಡರು ಸೇರಿಕೊಂಡು  ಪತ್ರಿಕಾಗೋಷ್ಟಿ ಮಾಡುವುದು ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗುವುದು ವಾಲ್ಮೀಕಿ ನಾಯಕ ಮಾದಿಗ ಚಲುವಾದಿ  ಬೋವಿ ಲಂಬಾಣಿ ಹಾಗೂ ಅಲೆಮಾರಿ ಅರೆ ಅಲೆಮಾರಿ ಸಮುದಾಯದ ಮುಖಂಡರು ಸಾರ್ವಜನಿಕರು ಬೃಹತ್ ಪ್ರತಿಭಟನೆ  ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದರು ಈ ಸಂದರ್ಭದಲ್ಲಿ ಮುಖಂಡರಾದ ಹಂಚ್ಯಾಳಪ್ಪ ತಳವಾರ ಪಪಂ ಸದಸ್ಯ ಮಂಜುನಾಥ್ ಕೋಳೂರು ಪ್ರಶಾಂತ್ ಆರಬೆರಳಿನ್ ಅಂದಪ್ಪ ಭಂಡಾರಿ ಮಂಜುನಾಥ್ ಮ್ಯಾದಾರ್ ಸುರೇಶ್ ಬಳೂಟಗಿ ಲಕ್ಷ್ಮಣ್ಣಾ ಕಾಳಿ  ಕನಕಪ್ಪ ಬ್ಯಾಡರ್ ಗಂಗಾಧರ ನಾರಾಯಣಿ ಮಲ್ಲಿಕಾರ್ಜುನ್ ಹುಲ್ಲೂರ್ ಭರಮಪ್ಪ ತಳವಾರ   ಶಿವಪ್ಪ ಸಂದಿಮನಿ  ರಾಮಣ್ಣ ಮುಂದಲಮನಿ ಯಮನೂರಪ್ಪ ಬೋವಿ ಪ್ರಶಾಂತ್ ಭೋವಿ ನಾಗರಾಜ ಭಜಂತ್ರಿ    ಹುಲುಗಪ್ಪ ಭಜಂತ್ರಿ  ತಾಲ್ಲೂಕಿನ ವಿವಿಧ ಮುಖಂಡರು ಇತರರು ಉಪಸ್ಥಿತರಿದ್ದರು  …

Attachments area