ಎಸ್.ರಾಮು ಮನೆಗೆ ಅರ್ಜುನ ಮುಂಡಾ ಭೇಟಿ ಸನ್ಮಾನ

ರಾಯಚೂರು,ಏ.೨೮-ಜಾರ್ಖಂಡ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಕೇಂದ್ರದ ಸಾಮಾಜಿಕ ನ್ಯಾ ಸಮಿತಿ ಇಲಾಖೆ ಸಚಿವರಾದ ಅರ್ಜುನ ಮುಂಡಾ ಮತ್ತು ವಾರಂಗಲ್ ಶಾಸಕ ಧರ್ಮಾರಾವ್ ಅವರು ಬಿಜೆಪಿ ಅಭ್ಯರ್ಥಿ ಡಾ.ಶಿವರಾಜ ಪಾಟೀಲ್ ಪರ ಪ್ರಚಾರಕ್ಕೆ
ರಾಯಚೂರ ನಗರ ಕ್ಷೇತ್ರಕ್ಕೆ ಅಗಮಿಸಿದ್ದರು.ಅವರು ಈ ಸಂದರ್ಭದಲ್ಲಿ ಅವರು ಭಾರತೀಯ ಜನತಾ ಪಕ್ಷದ ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಎಸ್.ರಾಮು ಅವರ ಅಸ್ಕಿಹಾಳದ ಮನೆಗೆ ಆಗಮಿಸಿ ,ಸನ್ಮಾನಿತರಾದರು.ರಾಮು ವಕೀಲರು ಗಣ್ಯರಿಗೆ ಶಾಲು ಹೊದಿಸಿ, ಸನ್ಮಾನಿಸಿದರು.ಈ ಸಂದರ್ಭದಲ್ಲಿ ರೈಲ್ವೆ ಬೋರ್ಡ ಸಧಸ್ಯರಾದ ಬಾಬುರಾವ್ ಅವರಿಗೂ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಸಕ ಶಿವರಾಜ ಪಾಟೀಲ್ರ ಸಹೋದರ ಪಂಪನಗೌಡ, ಪಕ್ಷದ ಎಸ್ಟಿ ನಗರಾಧ್ಯಕ್ಷ ಬಸವರಾಜ ಅಸ್ಕಿಹಾಳ, ಯಾಪಚೆಟ್ಟು ಗೋಪಾಲರೆಡ್ಡಿ, ತಿಮ್ಮನಗೌಡ, ಬಿ.ಗೋವಿಂದ, ಕನಕವೀಡು ಗಿರೀಶ, ಇತರರು ಇದ್ದರು.