ಎಸ್ ಯು ಸಿ ಐ ಸಂಸ್ಥಾಪನ‌ ದಿನಾಚರಣೆ

ಬಳ್ಲಾರಿ ಏ 24 : ಇಂದು ನಗರದಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ 74ನೇ ಸಂಸ್ಥಾಪನಾ ದಿನವನ್ನು ಪಕ್ಷದ ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು.
ಸಂಸ್ಥಾಪಕ ಶಿವದಾಸ್ ಘೋಷ್ ರವರ ಭಾವಚಿತ್ರಕ್ಕೆ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ರಾಧಾಕೃಷ್ಣ ಅವರು ಮಾಲಾರ್ಪಣೆ ಮಾಡಿದರು.
ನಂತರ ಪಕ್ವಷದಿಂದ ಆನ್ ಲೈನ್ ಮೂಲಕ ಸಭೆಯನ್ನುದ್ದೇಶಿಸಿ ರಾಜ್ಯ ಸೇಕ್ರೆಟರಿಯಟ್ ಸದಸ್ಯರ ಕೆ.ಸೋಮಶೇಖರ್ ಅವರು ಮಾತನಾಡುತ್ತಾ ಇಂದು ಕೇವಲ ಶೇ. 1% ಭಾರತೀಯರು ದೇಶದ 73% ಸಂಪತ್ತಿನ ಒಡೆಯರಾಗಿದ್ದರೆ. ಬಂಡವಾಳಗಿರ ಪರ ಕಾಂಗ್ರೆಸ್, ಬಿಜೆಪಿ ಇತರೆ ಪಕ್ಷಗಳು ಹಿತಾಸಕ್ತಿ ಕಾಪಡುತ್ತವೆ. ಸ್ವಾತಂತ್ರ್ಯ ಸಂಗ್ರಮದ ನಂತರ ಬಂಡವಾಳಶಾಹಿ ಅಧಿಕಾರ ಹಸ್ತಾಂತರ ಎಂದು ಮನಗಂಡರು. ಮಾರ್ಕ್ಸ್ ವಾದವನ್ನು ಅಳವಡಿಸಿ ಸಮಾಜವಾದಿ ಕ್ರಾಂತಿ ನೆರವೇರಿಸಲು ಈ ನೆಲದ ಒಂದು ನೈಜ ಅಕೃತಿಮ ಕಮ್ಯುನಿಸ್ಟ್ ಪಕ್ಷ ಕಟ್ಟಬೇಕೆಂದು 1948ರ ಏಪ್ರಿಲ್ 24ರಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಇಂಡಿಯಾ (ಕಮ್ಯುನಿಸ್ಟ್) ವನ್ನು ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸಿದರು. ಇಂದು ಇಡೀ ದೇಶದ ಬಹುತೇಕ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತದೆ, ಸಾವಿರಾರು ಜನರ ಸದಸ್ಯತ್ವ ಹೊಂದಿದೆ. ಹಾಗೂ ಲಕ್ಷಾಂತರ ಜನರ ಬೆಂಬಲ ಹೊಂದಿದೆ. ಕ್ರಾಂತಿಕಾರಿ ಹೋರಾಟ ಕಟ್ಟುಲು ಸಂಕಲ್ಪ ತೋಡುವ ದಿನವಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರು, ವಿದ್ಯಾರ್ಥಿ – ಯುವಜನರು, ಮಹಿಳೆಯರು, ರೈತ – ಕಾರ್ಮಿಕರು ಆನ್ ಲೈನ್ ಸಭೆಯಲ್ಲಿ ಭಾಗವಹಿಸಿದ್ದರು.