ಎಸ್.ಯು.ಸಿ.ಐನಿಂದ ಸೂಕ್ತಿ, ಛಾಯ ಚಿತ್ರ ಪ್ರದರ್ಶನ


(ಸಂಜೆವಾಣಿ ಪ್ರತಿನಿಧಿಯಿಂದ)                                     
ಬಳ್ಳಾರಿ, ನ.08: ಮಹಾನ್ ಮಾರ್ಕ್ಸಾ ವಾದಿ ಚಿಂತಕರು, ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಕಾಮ್ರೇಡ್ ಶಿವದಾಸ್ ಘೋಷ್‌ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಇಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಬಳ್ಳಾರಿ ಜಿಲ್ಲಾ ಸಮಿತಿಯಿಂದ  ಗಾಂಧಿ ಭವನ ದಮುಂದೆ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
ಈ ಸಂದರ್ಭದಲ್ಲಿ ಪಕ್ಷದ  ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ರಾಧಾಕೃಷ್ಣ ಉಪಾಧ್ಯರವರು ಭಾಷಣದ ಮೂಲಕ ಉದ್ಘಾಟನೆ ಮಾಡಿದರು
ಭಾರತದ ನೆಲದಲ್ಲಿ ನೈಜ ಕಮ್ಯುನಿಸ್ಟ್ ಪಕ್ಷ ಎಸ್.ಯು.ಸಿ.ಐ(ಸಿ) ಸ್ಥಾಪನೆ ಮಾಡಿದ ಕಾಮ್ರೇಡ್ ಘೋಷ್‌ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಇಡೀ ದೇಶದಾದ್ಯಂತ ವರ್ಷಪೂರ್ತಿ ಅತ್ಯಂತ ಗೌರವದಿಂದ ಆಚರಿಸಲು ಸಲಾಗುತ್ತಿದೆ. ಇಂದು ಸೂಕ್ತಿ ಮತ್ತು ಛಾಯಾಚಿತ್ರ ಕಾರ್ಯಕ್ರಮದ ಉದ್ಘಾಟನೆ  ನಡೆಯುತ್ತಿದೆ. . ಈ ವರ್ಷ ಆಗಸ್ಟ್ 5 ರಿಂದ ಕಾಮ್ರೇಡ್ ಶಿವದಾಸ್ ಘೋಷ್‌ರವರ ಜನ್ಮ ಶತಮಾನೋತ್ಸವ ಆರಂಭವಾಗುತ್ತಿರುವುದು ಅತ್ಯಂತ ಸ್ಫೂರ್ತಿದಾಯಕವಾಗಿದೆ ಎಂದರು.
ಅವರು ತೋರಿಸಿಕೊಟ್ಟಿರುವ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಕಾಮ್ರೇಡ್ ಶಿವದಾಸ್ ಘೋಷ್‌ರವರ ವಿಚಾರಗಳು ಶ್ರಮಿಕ ವರ್ಗಕ್ಕೆ ಅತ್ಯಂತ ಅವಶ್ಯಕತೆ ಇದೆ. ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಈ ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ, ಅವರ ಆಶಯವನ್ನು ಸಾಕಾರಗೊಳಿಸುವಲ್ಲಿ ನಾವೆಲ್ಲರೂ ಸಜ್ಜಾಗೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ  ಡಾ.ಪ್ರಮೋದ್.ಎನ್, ಎ.ದೇವದಾಸ್, ಆರ್.ಸೋಮಶೇಖರ್ ಗೌಡ,  ಗೋವಿಂದ್ ಮತ್ತು ಪಕ್ಷದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.