ಎಸ್ ಯುಸಿಐ ಪಕ್ಷದ ಅಭ್ಯರ್ಥಿ  ಕಾ.ಭಾರತಿಯಿಂದ ಹಲವೆಡೆ  ಪ್ರಚಾರ  

ದಾವಣಗೆರೆ.ಏ.೧೭; ದಕ್ಷಿಣ  ವಿಧಾನಸಭಾ  ಕ್ಷೇತ್ರದಲ್ಲಿ ಸ್ಪರ್ದಿಸುತ್ತಿರುವ ಎಸ್ ಯುಸಿಐ ಪಕ್ಷದ ಅಭ್ಯರ್ಥಿ  ಕಾ.ಭಾರತಿ  ಚುನಾವಣಾ  ಪ್ರಚಾರ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆ ದಕ್ಷಿಣ  ವಿಧನ  ಸಭಾ  ಕ್ಷೇತ್ರಗಳಾದ  ಶಿರಮಗೊಂಡನ ಹಳ್ಳಿ, ಬೆಳವನೂರು, ಆರನೇಕಲ್ಲು  — ಈ  ಭಾಗಗಳಲ್ಲಿ   ಬಹಳ  ಹುರುಪಿನಿಂದ   ಮಾಡಲಾಯಿತು.   ಪಕ್ಷದ   ಅಭ್ಯರ್ಥಿಯಾದ  ಕಾ. ಭಾರತಿ. ಕೆ  ಕೂಡ  ಈ ಮೊದಲ ದಿನದ  ಪ್ರಚಾರ  ಕಾರ್ಯಕ್ರಮದಲ್ಲಿ   ಉಪಸ್ಥಿತಿದ್ದರು.  ಪಕ್ಷದ  ನಾಮಫಲಕವನ್ನು ಹಿಡಿದುಕೊಂಡು  ಸಂಘಟನಾಕಾರರೆಲ್ಲರೂ  ಅಭ್ಯರ್ಥಿ ಭಾರತೀ ರವರನ್ನು  ಕ್ಷೇತ್ರದ  ಜನಗಳಿಗೆ  ಪರಿಚಯ  ಮಾಡಿಸುತ್ತಾ ಪಕ್ಷದ  ಜನಪರ  ಹೋರಾಟಗಳ ವಿಚಾರ  ಹೊತ್ತಿರುವ ಹಾಗು ನಮ್ಮ ಕಮ್ಯುನಿಸ್ಟ್  ಪಕ್ಷದ  ಕ್ರಾಂತಿಕಾರಿ ವಿಚಾರಧಾರೆಯನ್ನು ಹೊಂದಿರುವ   ಪಕ್ಷದ ಮಾಸ ಪತ್ರಿಕೆಯಾದ  “ಕಾರ್ಮಿಕ ದೃಷ್ಠಿಕೋನ ಪತ್ರಿಕೆಯನ್ನು  ಹಂಚುತ್ತಾ ಪಕ್ಷದ    ಜನಪರ  ಹೋರಾಟದ ಅಭ್ಯರ್ಥಿಯಾದ  ಕಾ. ಕೆ ಭಾರತಿ  ಯವರು  ಮತಯಾಚಿಸಿದರು. ನಗರದ  ದಕ್ಷಿಣ ಕ್ಷೇತ್ರದ  ಭಾಗವಾದ  ಕಾಯಿಪೇಟೆ, ಬಸವರಾಜ್ ಪೇಟೆ, ಬೆಣ್ಣೆಪೇಟೆ, ಗಡಿಯಾರ ಕಂಬ, ಹೊಂಡದ  ಸರ್ಕಲ್ ಮತ್ತು ಜಾಲಿನಗರ  — ಈ ಭಾಗಗಳಲ್ಲಿ  ಚುನಾವಣಾ  ಪ್ರಚಾರ  ಮಾಡಲಾಯಿತು.  ಈ  ಕಾರ್ಯಕ್ರಮದಲ್ಲಿ    ಪಕ್ಷದ   ರಾಜ್ಯ ಸಮಿತಿ  ಸದಸ್ಯರಾದ ಅಪರ್ಣ  ಬಿ. ಆರ್ ರವರು  ಇದ್ದರು ಹಾಗು  ಪಕ್ಷದ  ಜಿಲ್ಲಾ ಸಮಿತಿ  ಸದಸ್ಯರಾದ  ಕಾ. ಮಂಜುನಾಥ್  ಕುಕ್ಕುವಾಡ, ತಿಪ್ಪೇಸ್ವಾಮಿ, ಮಧು  ತೊಗಲೇರಿ, ಡಾ ವಸುದೆಂದ್ರ ರವರು  ಹಾಗು ಸಂಘಟನಾಕಾರರಾದ   ಪೂಜಾ, ಮಮತಾ, ನಾಗಸ್ಮಿತಾ, ಕಾವ್ಯ, ಧನುಷಾ, ಪರಶುರಾಮ್, ಮಂಜುನಾಥ್  ರೆಡ್ಡಿ,   ಇನ್ನು ಮುಂತಾದವರು  ಇದ್ದರು.