ಎಸ್.ಮಾರೆಪ್ಪ ಮೇಲೆ ಸುಳ್ಳು ಆರೋಪ: ಉನ್ನತ ಮಟ್ಟದ ತನಿಖೆಗೆ ಆಗ್ರಹ

ರಾಯಚೂರು, ನ.೧೪- ನಗರಸಭೆಯ ಪೌರಾ ಕಾರ್ಮಿಕರ ಹುದ್ದೆಗಳು ೨೨೫ ಬದಲಾಗಿ ೩೬೪ ನಿರ್ಮಲ ನಗರ ಮಂಜೂರಾದ ಹುದ್ದೆಗಳೆಂದು ಪರಿಗಣಿಸಬೇಕು ಮತ್ತು ಅಮೃತ ಯೋಜನೆಯ ರೂ . ೨೦ ಲಕ್ಷ ಅಕ್ರಮದಲ್ಲಿ ,ಎಸ್.ಮಾರೆಪ್ಪ ವಕೀಲರ ಮೇಲೆ ಹೊರಿಸಿರುವ ಸುಳ್ಳು ಆರೋಪಗಳ ಮೇಲೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ರಾಯಚೂರು ನಗರಸಭೆಯಲ್ಲಿ ಪೌರಕಾರ್ಮಿಕರ ಮಂಜೂರಾದ ಹುದ್ದೆಗಳನ್ನು ೨೨೫ ಕ್ಕೆ ಬದಲಾಗಿ ೩೬೪ ಎಂದು ಪರಿಗಣಿಸಲು ನಗರಸಭೆ ರಾಯಚೂರು ಇವರಿಗೆ ನಿರ್ದೇಶನ ನೀಡಬೇಕು. ನಗರಸಭೆಯಲ್ಲಿ ಕಾನೂನು ಬಾಹಿರವಾಗಿ ಉಮಾದೇವಿ ಪ್ರಕರಣದಲ್ಲಿ ನೇಮಕಗೊಂಡಿರುವ ೧೧೫ ಜನರ ನೇಮಕಾತಿಯಲ್ಲಿ ವಿಚಾರಣೆ ನಡೆದು ರಾಯಚೂರು ಜಿಲ್ಲಾಧಿಕಾರಿಗಳ ಆದೇಶ ದಿ೧೦.೦೪.೨೦೧೭ ನ್ಯೂ ರದ್ದುಪಡಿಸಲು ಅಂತಿಮ ಆದೇಶವನ್ನು ಕೂಡಲೇ ಹೊರಡಿಸಬೇಕು ಎಂದು ಒತ್ತಾಯಿಸಿದರು. ನೈರ್ಮಲ್ಯ ವಿಭಾಗದ ಪರಿಕರಗಳ,ಪೌರ ಕಾರ್ಮಿಕರ ಸಮ ಸಮವಸ ಕ ಕಾಯ್ದಿರಿಸಿದ ರೂ.೨೦ ಲಕ್ಷ ದುರುಪಯೋಗ ಪ್ರಕರಣದಲ್ಲಿ ಉನ್ನತ ಪೌರಾಯುಕ್ತರನ್ನು ಅಮಾನತ್ತುಗೊಳಿಸಬೇಕು.ಮಟ್ಟದ ತನಿಖೆ ನಡೆಸಿ ಕೂಡಲೇ ಪರಿಸರ ಅಭಿಯಂತರರನ್ನು ಮತ್ತು ಪೌರ ಕಾರ್ಮಿಕರಿಗೆ ಬೆಳಗಿನ ಕಳಪೆ ಉಪಹಾರ,ಕುಡಿಯಲು ಯೋಗ್ಯವಲ್ಲದ ನೀರನ್ನು ಸರಬರಾಜು ಮಾಡುವ ಗುತ್ತೆದಾರರೊಂದಿಗೆ ಶಾಮೀಲಾದ ಪರಿಸರ ಅಭಿಯಂತರರು,ಪೌರಾಯುಕ್ತರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು.ಪೌರ ಕಾರ್ಮಿಕರ ಕುಟುಂಬಗಳಿಗೆ ಮರಣ ಹೊಂದಿದ ೫ ಜನ,ನಿವೃತ್ತಿ ಹೊಂದಿದ ೩ ಜನ ನೇರವೇತನ ನಷ್ಟ ಪರಿಹಾರ ಮತ್ತು ಅವರ ಕುಟುಂಬಗಳಿಗೆ ಉದ್ಯೋಗ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಪೌರಾಡಳಿತ ನಿರ್ದೇಶಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಸ್.ಮಾರೆಪ್ಪ,ಜಿಲ್ಲಾಧ್ಯಕ್ಷ ಗೋಪಾಲ್ ಡಿ. ರಾಂಪೂರು,ಶ್ರೀನಿವಾಸ,ಶ್ರೀನಿವಾಸ್ ಕೊಪ್ಪರ,
ಅಂಜಿನೆಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.