ಎಸ್ ಬಿ ಕಾಮರ್ಸ ವಿದ್ಯಾರ್ಥಿಗಳಿಂದ ಕೋವಿಡ್ ಜಾಗೃತಿ

ಕಲಬುರಗಿ ಮಾ 24: ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ಸ್ವಯಂಸೇವಕರು ಕೋವಿಡ್ ನಿಯಂತ್ರಣ ಅಭಿಯಾನದಡಿ,ಮಾರ್ಚ 19 ರಿಂದ ನಿತರಂರವಾಗಿ ನಗರದ ಮಾಣಿಕೇಶ್ವರಿ ಕಾಲೋನಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜನರಿಗೆ ಕೋವಿಡ್ ಬಗ್ಗೆ ಜಾಗೃತಿ ಉಂಟು ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಸೇವೆಯನ್ನು ಪ್ರಾಚಾರ್ಯ ಡಾ.ಎನ್ ಎಸ್ ಪಾಟೀಲ,ಡಾ.ಸುನಂದಾ ವಾಂಜರಖೇಡೆ,ಡಾ ದಶರಥ ಮೇತ್ರೆ ಶ್ಲಾಘಿಸಿದ್ದಾರೆ