ಎಸ್.ಬಿ.ಐ ಮುಧೋಳ ಬ್ರಾಂಚ್ ವತಿಯಿಂದ ಪಿಂಚಣಿ ಸಾಲ ಕುರಿತು ಜಾಗೃತಿ

ಔರಾದ :ನ.13: ತಾಲೂಕಿನ ಮುಧೋಳ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಪಿಂಚಣಿ ಸಾಲ ಮೇಳ ಹಮ್ಮಿಕೊಳ್ಳಲಾಗಿದೆ, ಪ್ರಯುಕ್ತ ಸಾಲದ ಕುರಿತು ಸಿಬ್ಬಂದಿ ಮಾಹಿತಿ ನೀಡಿದರು.

ಬ್ಯಾಂಕ್ ಸಿಬ್ಬಂದಿ ಮೋಹನ್ ಎ.ಆರ್ ವ್ಯವಸ್ಥಾಪಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಧೋಳ ಬಿ, ಬಾಬುರಾವ್ ಜಿ ಗುಡ್ಡಾ ಅಧ್ಯಕ್ಷರು ಪಿಂಚಣಿ ಮತ್ತು ಒಕ್ಕುಟ ಪಿಂಚಣಿ ಸಾಲ ಮೇಳ ಜೀವಿತ ಪ್ರಮಾಣ ಪತ್ರ ನವಂಬರ್ ತಿಂಗಳ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಪಿಂಚಣಿ ಸಾಲವನ್ನು ಒಂದೇ ದಿನದಲ್ಲಿ 30 ಲಕ್ಷ ವಿತರಿಸಲಾಯಿತು 70 ವರ್ಷ ವಯಸ್ಸಿನವರಿಗೆ 200000 ರೂಪಾಯಿಗಳಿಗೆ ವರ್ಷಕ್ಕೆ 12 ರೂಪಾಯಿಗಳು ಅಪಘಾತ ವಿಮಾ ರಕ್ಷಣೆಯ ಬಗ್ಗೆ ಮಾಹಿತಿ ತಿಳಿಸಿದರು. ಹಾಗೂ ನಾಮಿನಿ ನಿರ್ದೇಶನ ನೋಂದಣಿ ಮತ್ತು ವಿಡಿಯೋ ಕರೆ ಮೂಲಕ ಜೀವಿತ ಪ್ರಮಾಣ ಪತ್ರ ಸಲ್ಲಿಸುವುದು, ಆರೋಗ್ಯ ವಿಮಾ ಉತ್ಪನ್ನಗಳು ಕುರಿತು ಜನರಿಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಹಾಗೂ ಗ್ರಾಮದ ಗಣ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು