ಎಸ್.ಬಿ.ಐ.ಬ್ಯಾಂಕಿನ 68 ನೇ ಸಂಸ್ಥಾಪನಾ ದಿನಾಚರಣೆ

(ಸಂಜೆವಾಣಿ ವಾರ್ತೆ)
ಬಾದಾಮಿ,ಜು3: ಇಂದು ಜನರಿಗೆ ಬ್ಯಾಂಕ್ ನಿಂದ ಒಳ್ಳೆಯ ಸೇವೆ ದೊರೆಯುತ್ತಿದೆ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಒಂದಾದ ಎಸ್.ಬಿ.ಐ.ತನ್ನದೇ ಆದ ಹೆಸರು ಹೊಂದಿದೆ ಎಂದು ಖ್ಯಾತ ವೈದ್ಯ ಡಾ.ಆರ್.ಸಿ.ಭಂಡಾರಿ ಹೇಳಿದರು.
ಅವರು ಪಟ್ಟಣದ ರಾಮದುರ್ಗ ರಸ್ತೆಯ ಎಸ್.ಬಿ.ಐ.ಶಾಖಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಎಸ್.ಬಿ.ಐ.ಬ್ಯಾಂಕಿನ 68 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಖಾ ವ್ಯವಸ್ಥಾಪಕ ಶಂಭುಕುಮಾರ ಸಾಹು ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್.ಬಿ.ಐ.ಬ್ಯಾಂಕಿನ ಕಾನೂನು ಸಲಹೆಗಾರ, ನ್ಯಾಯವಾದಿ ಎಂ.ಎಸ್.ಹಿರೇಮಠ, ಬನಶಂಕರಿ ಟ್ರಸ್ಟ್ ಸದಸ್ಯರಾದ ಚಿದಂಬರ ಆಚಾರ ಪೂಜಾರ, ವಿದ್ಯಾನಂದ ಪೂಜಾರ, ಶ್ರೀ ವೀರಪುಲಿಕೇಶಿ ಸಹಕಾರಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿ ಎಂ.ಬಿ.ದೇಶನ್ನವರ, ಬ್ಯಾಂಕಿನ ಗ್ರಾಹಕ, ರೈತ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದ ಮೈಲಾರಪ್ಪ ಹುಲ್ಲಿಕೇರಿ ಇವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು, ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಿಬ್ಬಂದಿಗಳಾದ ಧೂಳಪ್ಪ ಕಿತ್ತಲಿ, ಪ್ರಕಾಶ ದೊಡಮನಿ ಸೇರಿದಂತೆ ಎಸ್.ಬಿ.ಐ.ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.