ಎಸ್.ಬಿ.ಆರ್ ಸಿ.ಇ.ಟಿ. 2024ಚಿ. ದೊಡ್ಡಪ್ಪ ಅಪ್ಪ ಸ್ಕಾಲರ್‍ಶಿಪ್ ಪಡೆಯಲು ಸಿ.ಇ.ಟಿಗೆ ಸಾವಿರಾರು ವಿದ್ಯಾರ್ಥಿಗಳು ಹಾಜರು

ಕಲಬುರಗಿ:ಫೆ.5:ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷಕ್ಕಾಗಿ ಪ್ರವೇಶ ಬಯಸುವ ಹತ್ತನೇ ತರಗತಿಯ ಸಿ.ಬಿ.ಎಸ್.ಇ/ ಐ.ಸಿ.ಎಸ್.ಇ ಮತ್ತು ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ದಿ. 04-02-2024 ರಂದು ಮದ್ಯಾಹ್ನ. 1:00 ರಿಂದ 3:00 ಗಂಟೆಯವರೆಗೆ ಪ್ರವೇಶ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 2500 ವಿದ್ಯಾರ್ಥಿಗಳು ಹಾಜರಿದ್ದು ಪರೀಕ್ಷೆ ಬರೆದಿದ್ದಾರೆ.
ಈ ಪರೀಕ್ಷೆಯಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಹೆಸರಲ್ಲಿ ಸ್ಕಾಲರ್‍ಶಿಪ್ ರೂಪದಲ್ಲಿ 2.5 ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ.
ಈ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಎಸ್.ಬಿ.ಆರ್. ಪಿ.ಯು ಕಾಲೇಜು ಮತ್ತು ಎಸ್.ಬಿ.ಆರ್ ಪಬ್ಲಿಕ್ ಶಾಲೆಯಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಸ್ವಚ್ಛತೆÀ, ಶಾಂತತೆÀ ಹಾಗೂ ಪರಿಶುದ್ಧ ವಾತಾವರಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಾಂತ ಚಿತ್ತತೆಯಿಂದ ಪರೀಕ್ಷೆ ಬರೆದರು.
10ನೇ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯಗಳÀನ್ನು ಆಧಾರವಾಗಿಟ್ಟುಕೊಂಡು
ಪ್ರಶ್ನೆ-ಪತ್ರಿಕೆಯನ್ನು ಸಿದ್ಧಪಡಿಸಲಾಗಿತ್ತು. ಪ್ರಶ್ನೆ ಪತ್ರಿಕೆಯು 16 ವರ್ಷನ್‍ಗಳಿಂದ ಕೂಡಿದ್ದು, ಪಾರದರ್ಶಕವಾಗಿ ಪ್ರವೇಶ ಪರೀಕ್ಷೆ ನಡೆಸಲಾಯಿತು. ಇದು ಎಸ್.ಬಿ.ಆರ್ ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಮತ್ತು ಗುರು-ವೃಂದದವರ ಪರಿಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ.

ಪಾಲಕರಿಗಾಗಿ ಎಸ್.ಬಿ.ಆರ್ ಮೈದಾನದಲ್ಲಿ ಪೆಂಡಾಲ್ ನಿರ್ಮಿಸಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಕಾಲೇಜಿನ ಮುಖ್ಯ ಪ್ರವೇಶ ದ್ವಾರದಿಂದ ಪರೀಕ್ಷಾ ಕೋಠಡಿಯವರೆಗೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಲಹೆ-ಸಹಕಾರ ಹಾಗೂ ಮಾರ್ಗದರ್ಶನಕ್ಕಾಗಿ ಹೆಲ್ಪ-ಡೆಸ್ಕ ವ್ಯವಸ್ಥೆ ಮಾಡಲಾಗಿತ್ತು. ಮುಂಚಿತವಾಗಿ ಆನ್-ಲೈನ್ ರೆಜಿಸ್ಟ್ರೇಶನ್ ಮಾಡಿಸದೇ ಬಂದ ವಿದ್ಯಾರ್ಥಿಗಳಿಗೆ ಸ್ಪಾಟ್ ರೆಜಿಸ್ಟ್ರೇಶನ್ ವ್ಯವಸ್ಥೆ ಕೂಡಾ ಮಾಡಿಸಲಾಗಿತ್ತು.
ಕಾಲೇಜಿನ ಪ್ರಾಚಾರ್ಯರಾದ ಶ್ರೀ. ಎನ್.ಎಸ್. ದೇವರಕಲ್ ಸರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಕಾಲೇಜಿನ ಮೇಲ್ವಿಚಾರಕರಾದ ಡಾ. ಶ್ರೀಶೈಲ ಜಿ. ಹೊಗಾಡೆಯವರ, ಗುರುವೃಂದದವರ ಹಾಗೂ ಎಲ್ಲ ಸಿಬ್ಬಂದಿ ವೃಂದದವರ ಒಗ್ಗಟ್ಟಿನಿಂದ ಇಂದಿನ ಪರೀಕ್ಷೆ ವ್ಯವಸ್ಥಿತವಾಗಿ ನಡೆಯಿತು.

ಪ್ರವೇಶ ಪರೀಕ್ಷೆಯ ಫಲಿತಾಂಶವು ದಿನಾಂಕ: 08-02-2024 ರಂದು ಸಾಯಂಕಾಲ 5:00 ಗಂಟೆಯ ನಂತರ ಪ್ರಕಟಸಲಾಗುತ್ತದೆ. ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.