ಎಸ್.ಬಿ.ಆರ್ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಕಲಬುರಗಿ,ಸ 3:ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ವತಿಯಿಂದ ಚಂದ್ರಕಾಂತ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ನೇರ ಆಯ್ಕೆ ಕ್ರೀಡೆಗಳಲ್ಲಿ ಭಾಗವಹಿಸಿ, ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚೆಸ್ ಸ್ಪರ್ಧೆ ವಯೋಮಿತಿ-14 ಬಾಲಕರ ವಿಭಾಗದಲ್ಲಿ ಅಭಿನೀತ್ ಎಸ್. ಎಮ್,ವಯೋಮಿತಿ-14 ಬಾಲಕಿಯರ ವಿಭಾಗದಲ್ಲಿಸೋನಾಕ್ಷಿ ಕೆ. ಟಾಕಳೆ,ಲಕ್ಷ್ಮೀ ಆರ್. ರೋಣದ,ವಯೋಮಿತಿ-17 ಬಾಲಕರ ವಿಭಾಗದಲ್ಲಿ ಪ್ರಸಾದ ಮೋಟಗಿ,ಜಯಂತ ಎಸ್.ಎ, ಶ್ರೀಶಾಂತ ಎ. ಎನ್
,ಕರಾಟೆ ಸ್ಪರ್ಧೆಯಲ್ಲಿ ವಿನೀತ್, ದಾನೇಶ,ಪಂಕಜ್, ಅಮರ, ಜಯ್,ಸ್ಕೇಟಿಂಗ್‍ಸ್ಪರ್ಧೆಯಲ್ಲಿ ಸಾಯಿಶಕ್ತಿ ಮತ್ತು ಸ್ಪಂದನಾ ಮತ್ತು ಈಜುಸ್ಪರ್ಧೆಯಲ್ಲಿ ಬಸವಪ್ರಸಾದ ಎಸ್.ಪಾಟೀಲ್,ಅನಾಘಾ, ಅದಿತಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಎಲ್ಲಾ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ವಿದ್ಯಾಭಂಡಾರಿ
ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಹಾಗೂ ಪೂಜ್ಯ ಮಾತೋಶ್ರೀ
ಡಾ. ದಾಕ್ಷಾಯಣಿ ಅವ್ವಾಜಿ ಹಾಗೂ 9ನೇ ಪೀಠಾಧಿಪತಿಗಳಾದ ಪೂಜ್ಯ ಚಿ.
ದೊಡ್ಡಪ್ಪ ಅಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೂ ಸಂಸ್ಥೆಯ
ಕಾರ್ಯದರ್ಶಿ ಬಸವರಾಜ ದೇಶಮುಖ,ಪ್ರಾಚಾರ್ಯ ಎನ್.ಎಸ್. ದೇವರಕಲ್ ಶಾಲೆಯ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.