ಎಸ್.ಬಿ.ಆರ್. ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕಲಬುರಗಿ,ಜೂ.6: ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ತಮ ಸಾಧನೆ ಮಾಡುವುದರ ಮೂಲಕ ಕಾಲೇಜಿನ ಗೌರವ ಹೆಚ್ಚಿಸಿದ್ದಾರೆ.
ಕಲಬುರಗಿಯಲ್ಲಿ 2022ರ ನವೆಂಬರ್ 17 ರಿಂದ 19 ರ ವರೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು 19-ವರ್ಷ ವಯೋಮಿತಿಯ ರಾಜ್ಯ ಮಟ್ಟದ ಹಾಕಿ ಕ್ರಿಡಾಕೂಟವು ಹಮ್ಮಿಕೊಂಡಿತ್ತು. ಇದರಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಕುಮಾರ: ದೇವರಾಜ ಹಾಗೂ ಕುಮಾರಿ: ಭಾಗ್ಯಶ್ರೀ ಇವರು ಗ್ವಾಲಿಯರ್‍ನಲ್ಲಿ ನಡೆಯುತ್ತಿರುವ 19ವರ್ಷ ವಯೋಮಿತಿಯ ರಾಷ್ಟ್ರ ಮಟ್ಟದ ಹಾಕಿ ಕ್ರಿಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ, ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ, ಮಾತೋಶ್ರಿ ಡಾ. ದಾಕ್ಷಾಯಿಣಿ ಅವ್ವಾಜಿ ಚೇರಪರ್ಸನ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ, ಶ್ರೀ ಬಸವರಾಜ ದೇಶಮುಖ, ಕಾರ್ಯದರ್ಶಿಗಳು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ ಹಾಗೂ ಪ್ರಾಚಾರ್ಯರಾದ ಶ್ರೀ. ಎನ್.ಎಸ್. ದೇವರಕಲ್, ಮೇಲ್ವಿಚಾರಕರಾದ ಡಾ. ಶ್ರೀಶೈಲ್ ಹೊಗಾಡೆ, ಮತ್ತು ಪ್ರಾಧ್ಯಾಪಕ ವೃಂದದವರು ಪ್ರತಿಭೆ ಮೆರೆದ ಪ್ರತಿಭಾನ್ವಿತರಿಗೆ ಅಭಿನಂದಿಸಿ, ಉಜ್ವಲ- ಭವಿಷ್ಯಕಾಗಿ ಶುಭ ಹಾರೈಸಿದ್ದಾರೆ.