ಎಸ್.ಬಿ.ಆರ್.ನಲ್ಲಿ ‘ಮಕ್ಕಳ ದಿನಾಚರಣೆ’ ಹಾಗೂ ‘ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ 87ನೇ ಜನ್ಮದಿನಾಚರಣೆ’

ಕಲಬುರಗಿ:ನ.14:ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಪಂಡಿತ ಜವಾಹರಲಾಲ್ ನೇಹರೂ ರವರ ಜನ್ಮದಿನಾಚರಣೆಯನ್ನು ಮಕ್ಕಳ ದಿಚರಣೆಯ ರೂಪದಲ್ಲಿ ಹಾಗೂ ವಿದ್ಯಾಭಂಢಾರಿ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪ (ಮಹಾದಾಸೋಹ ಪೀಠಾಧಿಪತಿಗಳು, ಶರಣಬಸವೇಶ್ವರ ಸಂಸ್ಥಾನ. ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ. ಕುಲಾಧಿಪತಿಗಳು, ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿ.) ಅವರ 87ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಡಾ. ಶ್ರೀಶೈಲ ಹೊಗಾಡೆ ಮೇಲ್ವಿಚಾರಕರು, ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕಲಬುರಗಿ, ಇವರ ನೇತೃತ್ವದಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು ಸೇರಿ, ಪಂಡಿತ ಜವಾಹರಲಾಲ್ ನೇಹರೂ ರವರ ಭಾವಚಿತ್ರಕ್ಕೆ ಪೂಜೆ ಹಾಗೂ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಕುಮಾರ ರಜತ ಐನೊಳ್ಳಿ ಮತ್ತು ಕುಮಾರಿ ಶ್ರೇಯಾ ಚೌಡಶಟ್ಟಿ ಅವರು ‘ಪೂಜ್ಯ ಅಪ್ಪಾಜಿಯವರ’ ಜೀವನ ಮ್ತತು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಕುರಿತು ಮಾತನಾಡುತ್ತಾ ‘ಪೂಜ್ಯ ಅಪ್ಪಾಜಿ ಅವರು ನೂರಾರು ವರ್ಷದಿಂದ ಮೃದು ಮನಸ್ಸಿನ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣ ಕೊಡುವುದಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ವೈಜ್ಞಾನಿಕ ದೃಷ್ಟಿ ಮತ್ತು ಆಧ್ಯಾತ್ಮಿಕ ತಳಹದಿಯ ಮೇಲೆ ಈ ಸಂಸ್ಥೆ ಬೆಳೆಯಲು ಅಪ್ಪಾಜೀಯವರೇ ಕಾರಣ. ಈ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡಿದ ಅಸಂಖ್ಯಾತ ವಿದ್ಯಾರ್ಥಿಗಳು ಪ್ರಪಂಚದ ಮೂಲೆ ಮೂಲೆಯಲ್ಲಿ ಸೇವಾನಿರತಾಗಿದ್ದಾರೆ’ ಎಂದು ಈ ವಿದ್ಯಾರ್ಥಿಗಳು ತಮ್ಮ ಭಾಷಣದಲ್ಲಿ ನುಡಿದಿದ್ದಾರೆ.
ಪಿ.ಯು.ಸಿ ಪ್ರಥಮ ವರ್ಷದ ಕುಮಾರಿ ಸಂಜನಾ ಡೋಂಗರೆ, ಕುಮಾರಿ ಪ್ರಸನ್ನಿತಾ ಉದಗೀರೆ ಮತ್ತು ಕುಮಾರ ಸಿದ್ದಪ್ಪಾ ಚನ್ನಪ್ಪಾ ಅವರು ಮಕ್ಕಳ ದಿನಾಚರಣೆ ಕುರಿತು ಮಾತನಾಡುತ್ತಾ “ಸೇವೆ, ಪ್ರಿತಿ, ತ್ಯಾಗ, ಪರೋಪಕಾರ ಮತ್ತು ಸದ್ಭಾವನೆಗಳೆಂಬ ಸದ್ಗುಣಗಳು ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಳ್ಳಬೇಕು ಮತ್ತೆ ದುಶ್ಚಟಗಳಿಂದ ಹಾಗೂ ದುಷ್ಟಗುಣಗಳಿಂದ ಬಹು-ದೂರವಿರಬೇಕೆಂದು ಸಹಪಾಠಿಗಳಿಗೆ ಕಿವಿ ಮಾತು ಹೇಳಿದರು. ಪೂಜ್ಯರು ಆಹಾರ-ವಿಹಾರ ಮತ್ತು ವಿಚಾರಗಳಿಗೆ ವಿಶೇಷ ಕಾಳಜಿ ವಹಿಸುತ್ತಾರೆ” ಎಂದು ಈ ವಿದ್ಯಾರ್ಥಿಗಳು ತಮ್ಮ ಅನುಭವದÀ ಮಾತುಗಳನ್ನು ವ್ಯಕ್ತಪಡಿಸಿದ್ದರು.
ಕುಮಾರಿ ದೇವಿಕಾ, ಕುಮಾರಿ ಪ್ರಾಂಜಲಿ ಪಾಟೀಲ ಮತ್ತು ಕುಮಾರಿ ಭಾಗ್ಯಶ್ರೀ ಕವನ-ವಾಚನ ಮತ್ತು ವಚನ ಗಾಯನದೊಂದಿಗೆ ಸಮಾರಂಭದ ಶೋಭೆ ಹೆಚ್ಚಿಸಿದರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿ ವರ್ಗದವರು, ಎಲ್ಲ ಪಿಯುಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು