ಎಸ್.ಬಿ.ಆರ್ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಲಬುರಗಿ,ಸೆ.18:ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ತಮ ಸಾಧನೆ ಮಾಡುವುದರ ಮೂಲಕ ಕಾಲೇಜಿನ ಗೌರವ ಹೆಚ್ಚಿಸಿದ್ದಾರೆ.
ಎಸ್.ಬಿ.ಆರ್ ಕಾಲೇಜಿನ ವಿದ್ಯಾರ್ಥಿಗಳು ದಿನಾಂಕ: 15, 16ನೇ ಸೆಪ್ಟಂಬರ್ 2023 ರಂದು, ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ, ವಿವಿಧ ಕ್ರೀಡೆಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ತಾಲೂಕಾ ಮಟ್ಟದ ಕ್ರೀಡಾಕೂಟವು ಉಪ-ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ (ಪದವಿ-ಪೂರ್ವ) ಕಲಬುರಗಿ. ಇವರಿಂದ ಹಮ್ಮಿಕೊಳ್ಳಲಾಗಿತ್ತು.
ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯರ್ಥಿಗಳ ವಿವರ ಈ ಕೆಳಗಿನಂತಿದೆ.
ಬಾಲಕರ ವಿಭಾಗ
4 x 100 ಮೀ ರಿಲೆ → ಪ್ರಥಮ ಸ್ಥಾನ
4 x 400 ಮೀ ರಿಲೆ → ಪ್ರಥಮ ಸ್ಥಾನ
ಜಾವಲಿನ ಥ್ರೋ: ಕುಮಾರ ಚಂದನ → ದ್ವಿತೀಯ ಸ್ಥಾನ
ಬಾಡ್‍ಮಿಂಟನ್: ಸಿದ್ದರಾಜ, ವಿನಯ.ಬಿ → ಪ್ರಥಮ ಸ್ಥಾನ
ಟೇಬಲ್ ಟೆನ್ನಿಸ್: ಅಮನ್, ವಿವೇಕಾನಂದ→ ಪ್ರಥಮ ಸ್ಥಾನ
ಕರಾಟೆ ವೆಂಕಟೇಶ ನಿಖಿಲ್‍ಕುಮಾರ → ಪ್ರಥಮ ಸ್ಥಾನ
ಬಾಸ್ಕಟ್ ಬಾಲ್ → ಪ್ರಥಮ ಸ್ಥಾನ
ಕಬಡ್ಡಿ → ಅಭಿಷೇಕ.ಟಿ.ಜಿ, ರೋಹಿತ್
ಬಾಲಕೀಯರ ವಿಭಾಗ
4 x 100 ಮೀ ರಿಲೆ → ಪ್ರಥಮ ಸ್ಥಾನ
ಜಾವಲಿನ ಥ್ರೋ ಮತ್ತು ಡಿಸ್ಕಸ್ ಥ್ರೋ → ಕುಮಾರಿ: ದಾನೇಶ್ವರಿ ಪ್ರಥಮ ಸ್ಥಾನ
200 ಮೀ ಮತ್ತು 1500 ಮೀ ಓಟದಲ್ಲಿ → ಕುಮಾರಿ ಮಲ್ಲೇಶ್ವರಿ ದ್ವಿತೀಯ ಸ್ಥಾನ
400 ಮೀ ಓಟ → ಕುಮಾರಿ ಮೇಘಾ ತೃತೀಯ ಸ್ಥಾನ
ವಾಲಿಬಾಲ್ → ದ್ವಿತೀಯ ಸ್ಥಾನ
ಪುಟ್‍ಬಾಲ್ → ಪ್ರಥಮ ಸ್ಥಾನ
ಯೋಗಾ → ವೈಷ್ಣವಿ.ಬಿ.ಕೆ, ಭೂಮಿಕಾ, ಆರತಿ
ಬಾಡ್‍ಮಿಂಟನ್ → ಕೃಷಿಕಾ, ಪ್ರವಲಿಕಾ
ಟೇಬಲ್ ಟೆನ್ನಿಸ್ → ದೀಕ್ಷಾ, ಸೃಷ್ಠಿ, ಶ್ರೇಯಾ
ಚೆಸ್ → ಅಂಕಿತಾ ಪ್ರಥಮ ಸ್ಥಾನ
ಕರಾಟೆ → ಕುಮಾರಿ ಶ್ರದ್ದಾ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಈ ಎಲ್ಲಾ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಹಾಗೂ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಹಾಗೂ 9ನೇ ಪೀಠಾಧಿಪತಿಗಳಾದ ಪೂಜ್ಯ ಚಿ. ದೊಡ್ಡಪ್ಪ ಅಪ್ಪ ಅವರು ಆಶೀರ್ವದಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ. ಬಸವರಾಜ ದೇಶಮುಖ ಅವರು ಕ್ರೀಡಾಪಟುಗಳಿಗೆ ಅಭಿನಂದಿಸಿದ್ದಾರೆ. ಶಾಲೆಯ ಪ್ರಾಚಾರ್ಯರಾದ ಶ್ರೀ ಎನ್.ಎಸ್. ದೇವರಕಲ್ ಅವರು ಮಕ್ಕಳನ್ನುದ್ದೇಶಿಸಿ ಶಾಲೆಯ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದವರೆಗೆ ಕೊಂಡೊಯ್ಯಿರಿ ಎಂದು ಅಭಿನಂದಿಸಿ ಶುಭ ಹಾರೈಸಿದ್ದಾರೆ. ಮಕ್ಕಳ ಈ ಸಾಧನೆಗೆ ಮೇಲ್ವಿಚಾರಕರಾದ ಡಾ. ಶ್ರೀಶೈಲ್ ಹೊಗಾಡೆ, ಮತ್ತು ಪ್ರಾಧ್ಯಾಪಕ ವೃಂದದವರು, ದೈಹಿಕ ಶಿಕ್ಷಕರಾದ ಶ್ರೀ ನಾಗರಾಜ ಗುತ್ತೇದಾರ, ರಾಜು ಸದ್ಲಾಪುರೆ, ಸಿದ್ದು ಸದ್ಲಾಪುರೆ ಹಾಗೂ ಪೂಜಾ ಪವಾರ ಅವರು ಪ್ರತಿಭೆ ಮೆರೆದ ಪ್ರತಿಭಾನ್ವಿತರಿಗೆ ಅಭಿನಂದಿಸಿದ್ದಾರೆ.