ಎಸ್.ಬಿ.ಆರ್. ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ

ಕಲಬುರಗಿ:ಜ.13:ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ-ಪೂರ್ವ ಕಾಲೇಜಿನಲ್ಲಿ ಇಂದು ಮಹಾನ್ ಚಿಂತಕ, ಶ್ರೇಷ್ಠ ವಾಗ್ಮಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನಾಚರಣೆಯ ರೂಪದಲ್ಲಿ ಆಚರಿಸಲಾಯಿತು.
ಕಾಲೇಜಿನ ಮೇಲ್ವಿಚಾರಕರಾದ ಡಾ. ಶ್ರೀಶೈಲ ಹೊಗಾಡೆ ಇವರ ನೇತೃತ್ವದಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರ, ಉಪನ್ಯಾಸಕರ, ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ, ವಿದ್ಯಾರ್ಥಿ ನಾಯಕ ಕುಮಾರ: ಕುಮಾರ ಬಸವರಾಜ ದೇಶಮುಖ ಇವರು ‘ಸ್ವಾಮಿ ವಿವೇಕಾನಂದರ’ ಭಾವಚಿತ್ರಕ್ಕೆ ಪೂಜೆ ಹಾಗೂ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
‘ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗದುದ್ದಗಲಕ್ಕೂ ಪಸರಿಸಿದ, ಭಾರತÀ ಉಪಖಂಡದ ಯುವ ಚೈತನ್ಯವನ್ನು, ಆಧ್ಯಾತ್ಮಿಕ ಶಕ್ತಿಯನ್ನು ಮುಗಿಲೆತ್ತರಕ್ಕೆ ಏರಿಸಿದ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನ ಇಂದು. ಇದೇ ಹಿನ್ನೆಲೆಯಲ್ಲಿ ಜನೆವರಿ 12 ನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ಯುವಶಕ್ತಿ ಸಾಮಥ್ರ್ಯದ ಬಗ್ಗೆ ಅರಿವು ಹೊಂದಿದ್ದ ಸ್ವಾಮಿ ವಿವೇಕಾನಂದರು ತಮ್ಮ ಬೋಧನೆಗಳಲ್ಲಿ ಯುವ ಜನತೆ ಮತ್ತು ದೇಶವನ್ನು ಕೇಂದ್ರೀಕರಿಸುತ್ತಿದ್ದರು. ಯುವಕರಿಗೆ ಏಳಿ, ಎದ್ದೇಳಿ ಗುರಿ ಮುಟ್ಟುವ ವರೆಗೂ ಮಲಗದಿರಿ ಎಂದು ಎಚ್ಚರಿಸುತ್ತಿದ್ದರು. ಮಿಂಚಿ ಹೋದ ಮಾತಿಗೆ ಚಿಂತಿಸಿ ಫಲವಿಲ್ಲ, ಅಂನಂತ ಭವಿಷ್ಯ ನಿಮ್ಮ ಮುಂದೆ ಇದೆ ಒಳ್ಳೆಯ ಪರಿಶ್ರಮದಿಂದ ಕಾರ್ಯ ಮಾಡಿ ಯಶಸ್ಸು ನಿಮ್ಮದಾಗುತ್ತದೆ. ಎಂಬ ವಿವೇಕಾನಂದರ ಸಂದೇಶವನ್ನು ಸ್ಮರಿಸಿಕೊಳ್ಳಬೇಕು’ ಜೀವನದಲ್ಲಿ ತನ್ನ ಮೇಲೆ ತನಗೆ ವಿಶ್ವಾಸವಿರಬೇಕು ಎಂದು ಸ್ವಾಮಿ ವಿವೇಕಾನಂದರೂ ಹೇಳಿದ್ದಾರೆ. ಸ್ವಾಮೀಜಿಯವರ ಹತ್ತಿರ ಹಣ ಸಂಪತ್ತು ಇರಲಿಲ್ಲ. ಆದರೆ ಅವರ ಹತ್ತಿರ ಜ್ಞಾನದ ಭಂಡಾರವೇ ಇತ್ತು. ಅವರಿಗೆ ಯಾವಾಗಲೂ ಓದುವ ಹಸಿವು ಇತ್ತು. ದಿನದಲ್ಲಿ 18 ಗಂಟೆ ಓದುತ್ತಿದ್ದರು. ತಂದೆ ತಾಯಿಗಳ ಸೇವೆ ಮಾಡಬೇಕು, ಸಣ್ಣ ಸಣ್ಣ ಕೆಲಸಗಳಾದ ತಮ್ಮ ಮನೆ ಸ್ವಚ್ಛತೆ, ಬಟ್ಟೆ ತೊಳೆದುಕೊಳ್ಳವುದು, ಬೇರೆಯವರ ಒಳತಿಗಾಗಿ ಆಸಕ್ತಿ ತೋರಿಸುವುದು, ಉತ್ತಮ ಆಹಾರ ಸೇವನೆ, ಒಳ್ಳೆಯ ಕಾರ್ಯಕ್ಕಾಗಿ ಎಲ್ಲರನ್ನು ಸಂಘಟಿಸುವುದು, ಸ್ವತ: ಎಚ್ಚರಗೊಂಡು ಬೇರೆಯವರಿಗೂ ಎಚ್ಚರಿಸಬೇಕು, ಸದಾ ಸತ್ಯದ ಕಡೆಗೆ ನಡೆಯಬೇಕು ಹೀಗೆ ಸ್ವಾಮಿ ವಿವೇಕಾನಂದರು ಯುವಕರನ್ನು ಪ್ರೇರೇಪಿಸುತ್ತಿದ್ದರು. ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವ ಶಾಲಿ ತತ್ವಜ್ಞಾನಿಗಳಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು. ಸರ್ವಧರ್ಮ ಸಮ್ಮೇಳನದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದು ಧರ್ಮದ ಸಿದ್ಧಾಂತಗಳು ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಷಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು 1893 ರಲ್ಲಿ ಚಿಕಾಗೊ ನಗರದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದಿಂದ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ “ಅಮೇರಿಕಾದ ಸಹೋದರ ಸಹೋದರಿಯರೆ’ ಎಂಬ ವಾಕ್ಯ ಚಿರಸ್ಮರಣೀಯವಾಗಿದೆ. ಅವರಂತಹ ವಾಕ್ ಚಾತುರ್ಯವನ್ನೂ ನಮ್ಮಲ್ಲಿಯೂ ಸಹ ಅಳವಡಿಸಿಕೊಳ್ಳಬೇಕು’ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.