ಎಸ್.ಬಿ.ಆರ್ ಕಾಲೇಜಿನಲ್ಲಿ ಸೂರ್ಯ ನಮಸ್ಕಾರ ಫಾರ ವೈಟ್ಯಾಲಿಟಿ ಕಾರ್ಯಕ್ರಮ

ಕಲಬುರಗಿ:ಜ.15:ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ‘ಸೂರ್ಯ ನಮಸ್ಕಾರ ಫಾರ್ ವೈಟ್ಯಾಲಿಟಿ ಕಾರ್ಯಕ್ರಮ’ ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬಾರತ ಸರ್ಕಾರವು ಅಜಾದಿಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ
ದಿನಾಂಕ : 14-1-2022 ರಂದು ‘ಸೂರ್ಯ ನಮಸ್ಕಾರ ಫಾರ್ ವೈಟ್ಯಾಲಿಟಿ ಕಾರ್ಯಕ್ರಮ’ ವನ್ನು ಆಯೋಜಿಸಲು ನಿರ್ದರಿಸಿದ್ದು, ಸುಮಾರು 75 ಲಕ್ಷ ಜನರನ್ನು ತಲುಪುವ ಗುರಿ ಹೊಂದಲಾಗಿದೆ.

ಆದಕಾರಣ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸುಮಾರು 2000 ವಿದ್ಯಾರ್ಥಿಗಳು ಈ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, 13 ಬಾರಿ ಸೂರ್ಯ ನಮಸ್ಕಾರವನ್ನು ಮಾಡಿಸಲಾಯಿತು.

ಈ ಕಾರ್ಯಕ್ರಮವನ್ನು ಶ್ರೀ ಶಿವಾನಂದ ಸಾಲಿಮಠ. ಅಧ್ಯಕರು ಪತಂಜಲಿ ಯೋಗ ಸಮೀತಿ ಹಾಗೂ ಬಾರತ ಸ್ವಾಭಿಮಾನ ಜಿಲ್ಲಾಧ್ಯಕ್ಷರು ಕಲಬುರಗಿ. ಹಾಗೂ ಶ್ರೀ ಎಚ್. ಸುಭಾಷಚಂದ್ರ ಪತಂಜಲಿ ಯೋಗ ಸಮೀತಿ ಮತ್ತು ಬಾರತ ಸ್ವಾಭಿಮಾನ ಉಪಾಧ್ಯಕ್ಷರು ಕಲಬುರಗಿ. ಇವರ ಮಾರ್ಗದರ್ಶನದಲ್ಲಿ ನರೆವೇರಿಸಲಾಯಿತು. ಸೂರ್ಯನಮಸ್ಕಾರದ ಜೊತೆಗೆ ಅನೇಕ ಆಸನಗಳÀನ್ನೂ ಕೂಡಾ ಮಾಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಕೋವಿಡ್-19 ನಿಯಮಾವಳಿಗಳನ್ನು ಅನುಸರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು.

  ಡಾ. ಶ್ರೀಶೈಲ ಹೂಗಾಡೆ ಮೇಲ್ವಿಚಾರಕರು, ಹಿರಿಯ ಪ್ರಾಧ್ಯಾಪಕರಾದ ಡಾ. ಚಂದ್ರಕಾಂತ ಪಾಟೀಲ, ಉಪನ್ಯಾಸಕಾರದ ಕುಮಾರ ಹಣಮಂತ ಪಿ.ಜಿ, ಶ್ರೀ ಶಂಕರಲಿಂಗ ಬಡಿಗೇರ, ದೈಹಿಕ ಶಿಕ್ಷಕರಾದ ನಾಗರಾಜ ಗುತ್ತೇದಾರ, ಶ್ರೀಮತಿ ಶೈಲಜಾ ಪಾಟೀಲ ಹಾಗೂ ಕಾಲೇಜಿನ ಸಿಬ್ಬಂಧಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.