ಎಸ್.ಬಿ.ಆರ್‍ನಲ್ಲಿ ವಿಜೃಂಭಣೆಯ ಸ್ವಾತಂತ್ರ್ಯೋತ್ಸವ ಆಚರಣೆ

ಕಲಬುರಗಿ,ಆ 17: ಎಸ್.ಬಿ.ಆರ್ ಕಾಲೇಜಿನ ಮೈದಾನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ
ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಮಾತೋಶ್ರೀ ದಾಕ್ಷಾಯಣಿ ಎಸ್ ಅಪ್ಪಾ , ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಅವರ ಸಾನಿಧ್ಯದಲ್ಲಿ ಧ್ವಜಾರೋಹಣ ನೆರವೇರಿತು.
ಮಾತೋಶ್ರೀ ಡಾ. ದಾಕ್ಷಾಯಣಿ ಎಸ್ ಅಪ್ಪಾ, ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾಭಂಡಾರಿ ಪೂಜ್ಯಡಾ. ಶರಣಬಸವಪ್ಪ ಅಪ್ಪಾಜಿಯವರು ಸಂಸ್ಕøತಿ, ಭಕ್ತಿಗಳಜೊತೆಗೆ ಯೋಗ ಧ್ಯಾನಗಳ ಬಗ್ಗೆ ನುರಿತ
ಗುರುಗಳಿಂದ ತರಬೇತಿ ಕೊಡುವುದರಿಂದ ಮಕ್ಕಳವ್ಯಕ್ತಿತ್ವ ನಿರ್ಮಾಣವಾಗುತ್ತಿದೆ. ರಾಷ್ಟ್ರ ಪ್ರೇಮದ ಬಗ್ಗೆ ಇಲ್ಲಿವಿಶೇಷ ಕಾಳಜಿ ವಹಿಸಲಾಗುತ್ತದೆ. ಸ್ವತಂತ್ರವಾಗಿ ಬದುಕಲುಕಲಿತು, ರಾಷ್ಟ್ರ ಸೇವೆ ಮಾಡುವ ಸಾವಿರಾರು ವಿದ್ಯಾರ್ಥಿಗಳನ್ನು ನಾನಿಂದು ಕಣ್ಣಾರೆ ನೋಡುತ್ತಿದ್ದೇನೆ.ಶ್ರದ್ಧೆ ಭಕ್ತಿಯಿಂದ ಕಾಯಕದಲ್ಲಿ ನಿರತರಾದರೆ ಶರಣರ ಅನುಗ್ರಹ ಸದಾಕಾಲ
ನಿಮ್ಮೊಂದಿಗೆ ಇರುತ್ತದೆ. ದೇಶದ ಅಭಿವೃದ್ಧಿಗಾಗಿಅಧ್ಯಯನ ಮಾಡಿ ಕುಟುಂಬಕ್ಕೆ ಹಾಗೂ ಸಂಸ್ಥೆಗೆ ಗೌರವ ತಂದು ಕೊಡಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ 10 ಸಾವಿರ ವಿದ್ಯಾರ್ಥಿಗಳು ಹಾಜರಿದ್ದು, ಪಥ ಸಂಚಲನದ ಮೂಲಕ ಅತಿಥಿಗಳಿಗೆ ಗೌರವವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿಮಾಂಟೆಸ್ಸರಿಯಿಂದ 5ನೇ ತರಗತಿವರೆಗಿನ ಮಕ್ಕಳಿಂದ ದೇಶಭಕ್ತಿ ಮೆರೆಯುವಂತಹ ಹಲವಾರು ಚಟುವಟಿಕೆಗಳು ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು
ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ
ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ,ಶರಣಬಸವ ವಿಶ್ವವಿದ್ಯಾಲಯದಉಪಕುಲಪತಿ ಡಾ. ನಿರಂಜನ ನಿಷ್ಠಿ, ಹಾಗೂ ವಿವಿಧ
ಕಾಲೇಜುಗಳ ಪ್ರಾಚಾರ್ಯರು, ಡೀನರು, ಪ್ರಾಧ್ಯಾಪಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.