
ಶಹಾಪುರ: ಸೆ.1:ಹೊಸಕೇರಾದಿಂದ ಗಂಗನಾಳ ನಾಗನಟಗಿಯ ಗ್ರಾಮಗಳ ತಟದಿಂದ ಹಾಯ್ದು ಬರುವ ಕೆಬಿಜೆಎನ್,ಎಲ್, ಕಾಲುವೆ ಡಿ,-7 ಉಪ ಕಾಲುವೆ ಕೊಚ್ಚಿಕೊಂಡು ಹೋಗಿ ಇಂದು ಸಿಮೆಂಟ ಕಾಂಗ್ರೆಟ್ ಮೇಲ್ಪದರು ಮಾತ್ರ ಕಾಣುವಂತಾಗಿದೆ. ಈ ಹಿಂದೆ 4500 ಒಟಿ ರೂ.ಗಳ ವೆಚ್ಚದಲ್ಲಿ ಕಾಲುವೆ ಮರು ರಿಪೇರಿಯಾದರೂ ಈ ಕಾಲುವೆ ಬಾಯ್ದೆರೆದು ನಿಂತಿದೆ. ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ನೀರುಣಿಸುವ ಈ ಕಾಲುವೆ ಇಂದು ಹದಗೆಟ್ಟು ಹೋಗಿದೆ, ಅಧಿಕಾರಿಗಳು ಕಂಡು ಕಾಣದಂತೆ ಕಾಲಹರಣ ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಭೀಮರಾಯ ಪೂಜಾರಿ ಆರೋಪಿಸಿದ್ದಾರೆ.ಕೂಡಲೆ ಈ ಕಾಲುವೆ ರಿಪೇರಿ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪೂಜಾರಿ ಆಗ್ರಹಿಸಿದರು