
ಕಲಬುರಗಿ:ಆ.7:ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಸ್ನೇಹಿತರ ದಿನಾಚರಣೆ ಅಂಗವಾಗಿ, ಮಕ್ಕಳಲ್ಲಿ ವಿವಿಧ ಸಾಂಸ್ಕøತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಶ್ವ ಸ್ನೇಹಿತರ ದಿನವನ್ನು ಅರ್ಥಪೂರ್ಣ ರೂಪದಲ್ಲಿ ಆಚರಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸಾಂಸ್ಕøತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಣ್ಣ ಬಣ್ಣದ ಕಾಗದಗಳಿಂದ ಮಕ್ಕಳು ಫ್ರೆಂಡ್‍ಶಿಪ್ ಬ್ಯಾಂಡ್‍ಗಳನ್ನು ತಯಾರಿಸಿದರು. ಈ ಬ್ಯಾಂಡ್‍ಗಳನ್ನು ಚಿಕ್ಕ ಸ್ನೇಹಿತರು ತಮ್ಮ ಸ್ನೇಹಿತರ ಮಣಿಕಟ್ಟಿನ ಮೇಲೆ ಕಟ್ಟಿದರು. ಅಕ್ಕಿ, ಹೆಸರು, ಕಡಲೆ, ತೊಗರೆ ಮುಂತಾದ ಧಾನ್ಯಗಳನ್ನು ಬಳಸಿಕೊಂಡು ಅವುಗಳಿಗೆ ಬಣ್ಣಗಳನ್ನು ಬೆರೆಸಿ, ಅವುಗಳಿಂದ ರಾಷ್ಟ್ರಧ್ವಜ, ಕಮಲದ ಹೂವು, ಮರ-ಗಿಡ, ಪ್ರಾಣಿ-ಪಕ್ಷಿಗಳ ಮುಂತಾದ ಚಿತ್ರಗಳನ್ನು ಬಿಡಿಸಲು ಮಕ್ಕಳಿಗೆ ಚಟುವಟಿಕೆಗಳನ್ನು ನೀಡಲಾಗಿತ್ತು. ಶಾಲಾ ಮಕ್ಕಳಿಂದ ರಂಗು ರಂಗಿನ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದರಿಂದ ಇಡೀ ಶಾಲೆಯ ವಾತಾವರಣಕ್ಕೆ ಹಬ್ಬದ ಕಳೆ ಬಂದಿತ್ತು.
ಶ್ರೀಮತಿ ಶಾರಧಾ ರಾಂಪೂರೆ ಮೇಲ್ವಿಚಾರಕರು, ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆ ಕಲಬುರಗಿ, ಇವರ ನೇತೃತ್ವದಲ್ಲಿ, ಎಲ್ಲ ಗುರು-ವೃಂದದವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಅವರು ಮಕ್ಕಳಿಗೆ ಸ್ನೇಹ ದಿನದ ಶುಭಾಶಯಗಳನ್ನು ಕೋರಿ “ಸ್ನೇಹ ಎಂಬ ಒಳ್ಳೆಯ ಬಾಂಧವ್ಯದ ಮಹತ್ವವನ್ನು ಸಾರಲು ಪ್ರತಿ ವರ್ಷ ಅಂತರಾಷ್ಟ್ರೀಯ ಸ್ನೇಹಿತರ ದಿನವನ್ನು ಆಚರಣೆ ಮಾಡಲಾಗುತ್ತದೆ. ಸ್ನೇಹ ಎಂಬ ಬಾಂಧವ್ಯ ಶುದ್ಧ ಸ್ವರೂಪದ್ದಾಗಿದ್ದು ರಕ್ತ ಸಂಬಂಧವಲ್ಲವಾದರೂ ಪ್ರೀತಿಯಿಂದ ಕೂಡಿದೆ. ಇಂದು ಸ್ನೇಹಿತರು ಪರಸ್ಪರ ಕೈ ಮೇಲೆ ಫ್ರೆಂಡ್‍ಶಿಪ್ ಬ್ಯಾಂಡ್‍ಗಳನ್ನು ಕಟ್ಟಿ, ‘ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಫಾರೆವರ್’ ಎಂದು ಭರವಸೆ ನೀಡಿ ಹರ್ಷಿಸುತ್ತಾರೆ. ಯಾವುದೇ ಜಾತಿ, ಧರ್ಮ, ಜನಾಂಗ, ಸಂಸ್ಕೃತಿಯ ಬೇಧವಿಲ್ಲದೇ ಸ್ನೇಹದ ಬಲವಾದ ಬಂಧ ಮತ್ತು ಪ್ರೀತಿಯ ಪ್ರಾಮುಖ್ಯತೆಯನ್ನು ಸಾರಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಜನರ ನಡುವೆ ಸ್ನೇಹವಿದ್ದರೆ ಸಮುದಾಯಗಳ ನಡುವೆ ಬಾಂಧವ್ಯ ವೃದ್ಧಿಯಾಗುತ್ತದೆ. ವಿಶ್ವದ ಎಲ್ಲ ದೇಶಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿ, ವಿಶ್ವ ಶಾಂತಿಗೆ ಸ್ಫೂರ್ತಿಯಾಗುತ್ತದೆ ಎನ್ನುವ ಉದ್ದೇಶದಿಂದ ಪ್ರತಿ ವರ್ಷ ಅಂತರಾಷ್ಟ್ರೀಯ ಸ್ನೆಹ ದಿನವನ್ನು ಆಚರಣೆ ಮಾಡಲಾಗುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀ ಎನ್ ಎಸ್ ದೇವರಕಲ್ ಸರ್ ಅವರು ಮಕ್ಕಳಿಗೆ ಶುಭಹಾರೈಸಿ, ಈ ದಿನದ ಮಹತ್ವವನ್ನು ಅರಿತುಕೊಳ್ಳುವಂತೆ ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರೂ ಸಹ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.