ಎಸ್.ಪಿ.ಬಾಲಸುಬ್ರಮಣ್ಯಂ ಅವರ 77ನೇ ಹುಟ್ಟು ಹಬ್ಬ ಸಂಭ್ರಮ ಹಾಡು ಹೇಳಿ ರಂಜಿಸಿದ ಖ್ಯಾತ ನಟ ಶ್ರೀನಾಥ

ಕಲಬುರಗಿ :ಜೂ.4: ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ ಗ್ಯಾಲರಿಯಲ್ಲಿ ಸುಕಿ ಸಾಂಸ್ಕ್ರತಿಕ ಸಂಸ್ಥೆ ರವಿವಾರ ರಂದು ಪದ್ಮಭೂಷಣ ಡಾ. ಎಸ್.ಪಿ.ಬಾಲಸುಬ್ರಮಣ್ಯಂ ಅವರ 77ನೇ ಹುಟ್ಟು ಹಬ್ಬದ ನಿಮಿತ್ತ ಗೀತ ಗಾಯನ ಸಂಭ್ರಮ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ಪ್ರಣಯರಾಜ ಶ್ರೀನಾಥ ಹಾಡಿ ರಂಜಿಸಿದರು. ಎಸ್.ಪಿ.ಬಿ ಅವರು ಕುರಿತು ಶ್ರೀನಾಥ ತಮ್ಮ ನೆನಪುಗಳನ್ನು ಮೆಲಕು ಹಾಕಿದರು.
ಕಾರ್ಯಕ್ರಮ ಖ್ಯಾತ ಚಿತ್ರಕಲಾವಿದ ಡಾ.ವ್ಹಿ.ಜಿ.ಅಂದಾನಿ ಉದ್ಘಾಟಿಸಿ ಮಾತನಾಡಿದರು. ಎಸ್.ಪಿ.ಬಿ ಅವರ ಸಾಧನೆ ಅಮರ ಎಂದು ಅವರು ಹೇಳಿದರು. ಸಾಂಸ್ಕ್ರತಿಕ ಕಾರ್ಯಕ್ರಮಗಳು ಸಮಾಜದ ಉನ್ನತಿಗೆ ಅಗತ್ಯ ಎಂದು ಖ್ಯಾತ ಪ್ರಕಾಶಕ ಸಂಸ್ಥೆ ಬಸವರಾಜ ಕೋನೆಕ್ ಹೇಳಿದರು. ಹಿರಿಯ ಗಾಯಕ ಮಧುಸೂದನ ಮಲ್ಲಾಬಾದಿ ಅವರು ಕರೋಕೆ ಮಾಧ್ಯಮದ ಭರಾಟೆಯಲ್ಲಿ ವಾದ್ಯ ಕಲಾವಿದರು ಹಿನ್ನಲೆಗೆ ಸರಿಯುತ್ತಿರುವುದು ಬೇಸರ ಸಂಗತಿ ಅವರಿಗೆ ಮುಂಬರುವ ದಿನಗಳಲ್ಲಿ ವೇದಿಕೆ ಒದಗಿಸಿ ಕೊಡುವ ಕಾರ್ಯ ಆಗಬೇಕೆಂದರು.
ಗಾಯಕ ಕಿರಣ ಪಾಟೀಲ ಅವರು ಅಧ್ಯಕ್ಷತೆವಹಿಸಿದ್ದರು. ಕಲಾವಿದ ಎಂ .ಸಂಜೀವ ಕಲಬುರಗಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡಿದರು. ಲಕ್ಮೀಕಾಂತ ಪಾಟೀಲ ನಿರೂಪಿಸಿದರು. ಕವಿರಾಜ ನಿಂಬಾಳ ವಂದಿಸಿದರು. ವಿಠಲ ಮೇತ್ರೆ , ಮಹೇಶ ಕುಮಾರ ನಿಪ್ಪಾಣಿ, ಕಿರಣ ಪಾಟೀಲ, ಪ್ರಕಾಶ ದಂಡೋತಿ,ಸಿದ್ದಣ್ಣ ದಿಗಾಂವ,ವಾಣಿಶ್ರೀ, ಶರಣು ಪಟ್ಟಣ್ಣಶೆಟ್ಟಿ, ಅಂಬರೀóಷ ಎಸ್.ಪಿ.ಬಿ ಅವರ ಚಿತ್ರ ಗೀತೆಗಳನ್ನು ಹಾಡಿ ರಂಜಿಸಿದರು. ಲಕ್ಷ್ಮೀಕಾಂತ ಮನೋಕರ್, ಲಕ್ಷ್ಮೀಕಾಂತ ಸೀತನೂರ, ಶಿವಾನಂದ ಕೊಪ್ಪದ, ಹಣಮಂತ ಮಂತಟ್ಟಿ , ದೌಲತರಾವದೇಸಾಯಿ, ಸಿದ್ದು ಮರಗೋಳ,ಯುಸುಫ್ ಪಟೇಲ್, ಪ್ರತಿಭಾ ಕಡಗಂಚಿ, ವೆಂಕಟೇಶ ಗುಪ್ತಾ, ರವಿಶಂಕರಮ್ಮಾ ಚಿ.ಸಿ ನಿಗಂಗಣ್ಣ ಬಾಬು ನಿರ್ಗುಡಿ, ಅಶೋಕ ಶೆಟಗಾರ , ಶ್ರವಣ ಪ್ರಾಣೇಶ ಸಾಗರ, ಆನಂದ ಪಾಟೀಲ ಮುಂತಾದವರು ಇದ್ದರು.