ಎಸ್ ಪಿ ಎಸ್ ಸಹಕಾರಿ ಬ್ಯಾಂಕಿಗೆ ರೂ 1.90 ಕೋಟಿ ರೂ ಲಾಭ


ಸಂಜೆವಾಣಿ ವಾರ್ತೆ
ಸಂಡೂರು:ಏ: 2: 25ನೇ ರಜತ ಮಹೋತ್ಸೋವದ ಸಂಭ್ರಮದಲ್ಲಿರುವ ಸಂಡೂರಿನ ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕು ಪ್ರಸಕ್ತ 2022-23ನೇ ಆರ್ಥಿಕ ವರ್ಷದಲ್ಲ್ಲಿ ಒಟ್ಟು ಲಾಭ ರೂ 2.56 ಕೋಟಿ ಲಾಭಗಳಾಗಿದ್ದು,  ಆದಾಯ ತೆರಿಗೆ ಪಾವತಿಸಿದ ನಂತರ  ರೂ 1.90ಕೋಟಿಗಳಷ್ಟು ನಿವ್ವಳ ಲಾಭಗಳಿಸಿರುತ್ತದೆಂದು ಬ್ಯಾಂಕಿನ ಅಧ್ಯಕ್ಷರು ತಿಳಿಸಿದರು. ಪ್ರಸಕ್ತ ಹಣಕಾಸು 2022-23ನೇ ವರ್ಷದ ಅಂತ್ಯದಲ್ಲಿ ಠೇವಣಿ ರೂ. 102.95ಕೋಟಿ  ಹಾಗೂ  ಸಾಲ ಮತ್ತು ಮುಂಗಡಗಳು   ರೂ. 28.08ಕೋಟಿ ಇದ್ದು, ಒಟ್ಟು ಬ್ಯಾಂಕಿನ ವ್ಯವಹಾರವು 131.03ಕೋಟಿ ಇರುತ್ತದೆ. ಈ ಸಾಲಿನಲ್ಲಿಯೂ ಸಹ ಬ್ಯಾಂಕಿನ ವಸೂಲಾತಿ ಉತ್ತಮವಾಗಿದ್ದು, ಬ್ಯಾಂಕು ಸತತವಾಗಿ 0% ಎನ್. ಪಿ. ಎ. ( ಅನುತ್ಪಾದಕ ಆಸ್ತಿ ) ಹೊಂದಿರುತ್ತದೆಂದು ತಿಳಿಸಿರುತ್ತದೆ.
ಡಿಜಿಟಲ್ ಬ್ಯಾಂಕಿಂಗ್ ವಾಹಿವಾಟುಗಳಾದ ಎಟಿಎಂ ಮೋಬೈಲ್ ಬ್ಯಾಂಕಿಂಗ್ ಹಾಗೂ ಯುಪಿಐ ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದು, ಸಂಡೂರು ಹಾಗು ಯಶವಂತನಗರದಲ್ಲಿ ಕೆಂದ್ರಗಳನ್ನು ಮುಂಬರುವ ದಿನಗಳಲ್ಲಿ ತೆರೆಯಲು ನಿರ್ದರಿಸಲಾಗಿದೆಂದು ತಿಳಿಸಿದರು.
ಹಣಕಾಸಿನ 2023-24ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕಿನ 25ನೇ ವರುಷದ ರಜತ ಮಹೋತ್ಸವವನ್ನು ಆಚರಿಸಲಾಗುವುದರ ಜೊತೆಗೆ ಈ ಸಾಲಿನಲ್ಲಿ  ವೆಸ್ಕೋ ಕಂಪನಿಯ ಸಹಯೋಗದೊಂದಿಗೆ ಆರೋಗ್ಯ ಶಿಬಿರಗಳ ಜೊತೆಗೆ ವಿವಿಧ ಸಾಮಾಜಿಕ ಸೇವೆಗಳ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ  ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಬ್ಯಾಂಕಿನ ಸದಸ್ಯರು ಹಾಗು ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟಿರುವ ವಿಶ್ವಾಸ, ಪ್ರೀತಿ ಹಾಗು ಬೆಂಬಲದಿಂದ ಪ್ರಗತಿ ಪಥದಲ್ಲಿ ಬೆಳೆಯುತ್ತಿರುವ ಈ ಬ್ಯಾಂಕಿಗೆ ಸಂಡೂರು ನಾಗರಿಕರ ಸಹಕಾರ  ಇದ್ದು, ಸೌಜನ್ಯಶೀಲ ಆರ್ಥಿಕ ಸೇವೆಯನ್ನು ಸಂಡೂರಿನ ನಾಗರಿಕರು ಇನ್ನೂ ಹೆಚ್ಚು ಪಡೆಯಲಿ ಎಂದು ಆಶಿಸಿದರು.