ಎಸ್.ಪಿ.ಎಸ್ ಬ್ಯಾಂಕ್ ಗೆ 1.92 ಕೋಟಿ ರೂ. ನಿವ್ವಳ ಲಾಭ


ಸಂಜೆವಾಣಿ ವಾರ್ತೆ
ಸಂಡೂರು: ಜು: 24: ಕಳೆದ ಹಣಕಾಸು ವರ್ಷ 2022-23ರಲ್ಲಿ ಸಂಡೂರು ಪಟ್ಟಣದ ಎಸ್.ಪಿ.ಎಸ್. ಬ್ಯಾಂಕು 25 ವರ್ಷಗಳ ತೃಪ್ತಿದಾಯಕ ಪ್ರಗತಿಯನ್ನು ಸಾಧಿಸುವ ಮೂಲಕ ರಜತಮಹೋತ್ಸವ ಸಂಭ್ರಮಾಚರಣೆಯನ್ನು ಆಚರಿಸಿಕೊಳ್ಳುತ್ತಿರುವುದು ಸಂತಸವಾಗಿದೆ. ಪ್ರಸಕ್ತ ವó 2022-23ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕು 2.52 ಕೋಟಿ ರೂ. ಲಾಭಗಳಿಸಿ ಆದಾಯ ತೆರಿಗೆ ಪಾವತಿಸಿದ ನಂತರ 1.92 ಕೋಟಿ ನಿವ್ವಳ ಲಾಭಗಳಿಸಿರುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂತ್ಯದಲ್ಲಿ 103.07 ಕೋಟಿ ಇದ್ದು ಸಾಲ ಮತ್ತು ಮುಂಗಡಗಳ 28.08 ಕೋಟಿ ರೂಪಾಯಿ ಇರುತ್ತದೆ. ಈ ಸಾಲಿನಲ್ಲಿಯೂ ಸಹ ಬ್ಯಾಂಕಿನ ವಸೂಲಾತಿ ಉತ್ತಮವಾಗಿದ್ದು ಬ್ಯಾಂಕು ಸತತವಾಗಿ 0% ಅನುತ್ಪಾದಕ ಆಸ್ತಿಹೊಂದಿರುತ್ತದೆ. ಎಂದು ಸಂಡೂರು ಪಟ್ಟಣದ ಸೌಹಾರ್ದ ಸಹಕಾರಿ ಬ್ಯಾಂಕ್.ನಿ. ಸಂಸ್ಥಾಪನಾ ಅಧ್ಯಕ್ಷ ಕೆ.ಎಸ್. ನಾಗರಾಜರವರು ಮನದಾಳದ ಮಾತುಗಳನ್ನಾಡಿದರು.
ಅವರು ಪಟ್ಟಣದ ಎಲ್.ಬಿ. ಕಾಲೋನಿಯ 11ನೇ ವಾರ್ಡಿನ ಎಸ್.ಪಿ.ಎಸ್. ಬ್ಯಾಂಕ್ ಪಕ್ಕ ದಲ್ಲಿರುವ ರತ್ನದೀಪಾ ಸಭಾಂಗಣದಲ್ಲಿ 26ನೇ ವಾರ್ಷಿಕೋತ್ಸವವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು 2026 ಹಣಕಾಸು ವರ್ಷಾಂತ್ಯದ ವೇಳೆಗೆ ವ್ಯಕ್ತಿಯಿಂದ ವ್ಯಾಪಾರಿ ಡಿಜಿಟಲ್ ವಾಹಿವಾಟುಗಳ ಸಂಖ್ಯೆ 1.5 ಟ್ರೆಲಿಯನ್ ಡಾಲರಿಗೆ ತಲುಪುವು ಸಾಧ್ಯತೆ ಇದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತವು ಬಳಕೆಯಲ್ಲಿರುವ ಶೇ. 50 ರಷ್ಟು ನಗದು ರಹಿತ ಅರ್ಥಿಕತೆಯಾಗುವ ನಿರೀಕ್ಷೆ ಇದೆ. ಎಂದು ವರದಿಯೊಂದು ಹೇಳಿದೆ. ಯು.ಪಿ.ಐ. ಬಳಕೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಪಟ್ಟು ಉತ್ತಮ ಬೆಳವಣಿಗೆ ಕಂಡಿದೆ. ಹಣಕಾಸು ವರ್ಷ 2023 ರಲ್ಲಿ ಒಟ್ಟು ವಾರ್ಷಿಕ ವಹಿವಾಟಿನ ಮೌಲ್ಯವು 1.7 ಟ್ರೇಲಿಯನ್ ಡಾಲರಿಗೆ ತಲುಪಿದೆ. ಮತ್ತು ಪಿ.ಟಿ.ಎಂ. ವಹಿವಾಟುಗಳು 380 ಶತಕೋಟಿ ಡಾಲರಿಗೆ ಏರಿದೆ. ಭಾರತದಲ್ಲಿ ಹಣದುಬ್ಬರ ತಉಸು ಇಳಿಕೆಯಾಗಿದ್ದು ಇತ್ತೀಚಿನ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ರಸರ್ವಬ್ಯಾಂಕ್ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿಟ್ಟಿತ್ತು. ಮುಂದಿನ ಸಭೆಯಲ್ಲಿ ಬಡ್ಡಿಧರವು ಜಾಗತಿಕ ಪ್ರಭಾವಗಳು ಮತ್ತು ಹಣದುಬ್ಬರದ ಏರಿಳಿತಗಳನ್ನು ಅವಲಂಬಿಸಿರುತ್ತದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಸಿ.ರವಿಶಂಕರ ಮಾತನಾಡಿ ಬ್ಯಾಂಕಿನ ಸದಸ್ಯರ ಸಂಖ್ಯೆಯು ದಿನಾಂಕ: 31.03.2023ಕ್ಕೆ 4834ಇರುತ್ತದೆ. ಬ್ಯಾಂಕಿನ ಷೇರು ಬಂಡವಾಳವು ಪ್ರಸಕ್ತ ಸಾಲಿನ ಅಂತ್ಯಕ್ಕೆ 110.61 ಲಕ್ಷ ಇರುತ್ತದೆ. ವರದಿ ಸಾಲಿನ ಆರಂಭದಲ್ಲಿ ಬ್ಯಾಂಕಿನ ವಿವಿಧ ರಈತಿಯ ಠೇವಣಿ ಮೊತ್ತು 92.46 ಕೋಟಿ ರೂ. ಇದ್ದು ಠೇವಣಿ ಸಂಗ್ರಹದಲ್ಲಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಶೇ. 11.48 ಪ್ರಗತಿಯನ್ನು ಸಾಧಿಸಿದೆ. ಎಂದು ತಿಳಿಸಿದರು.
ಬಿ.ಎಸ್. ಬೊಮ್ಮಯ್ಯ ನಿರ್ದೇಶಕರು ಮಾತನಾಡಿ ಭಾರತೀಯ ರಿಸರ್ವ ಬಯಾಂಕಿನ ಹೂಡಿಕೆಯ ನಿಯಮಾವಳಿಗಳಂತೆ ಎಸ್.ಎಲ್.ಅರ್. ಹೂಡಿಕೆಗಳನ್ನು ಸರಕಾರಿ ಭದ್ರತಾ ಪತ್ರದಲ್ಲಿ ಮಾಡಲಘಿದ್ದು ಇತರೇ ಬ್ಯಾಂಕುಗಳಲ್ಲಿ ಭಾರತೀಯ ರಿಸರ್ವ ಬ್ಯಾಂಕಿನ ನಿರ್ದೇಶನಗಳಿಗನುಗುಣವಾಗಿ ಹೂಡಿಕೆಗಳನ್ನು ಲಾಭದಾಯಕವಾಗಿ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಮಾಡಲಾಗಿದೆ. ಒಟ್ಟು ಹೂಡಿಕೆಯ ಮೊತ್ತ 75.04 ಕೋಟಿ. ಗಳಾಗಿವೆ.
ಅಂಕಮನಾಳ್ ಸಿದ್ದಪ್ಪ ನಿರ್ದೇಶಕ ಮಾತನಾಡಿ ಪ್ರಸ್ಕತ ಸಾಲಿನಲ್ಲಿ ಬ್ಯಾಂಕು 2.52 ಕೋಟಿ ಒಟ್ಟು ಲಾಭವನ್ನು ಗಳಿಸಿದ್ದು ಆದಾಯ ತೆರಿಗೆ ಪಾವತಿಸಿ 1.92 ಕೋಟಿ ಲಾಭ ಗಳಿಸಿದೆ.ಬ್ಯಾಂಕಿನ ಆಡಳಿತ ಮಂಡಳಿಯವರು ಪ್ರಸಕ್ತ ವರ್ಷ ಶೇ> 20 ರಷ್ಟು ಲಾಭಾಂಶವನ್ನು ನೀಡಲು ತೀರ್ಮಾನಿಸಿದೆ. ಜ್ಯೋತಿ ನಂಜುಂಡಪ್ಪ ನಿರ್ದೇಶಕ ಮಾತನಾಡಿ 2022-23ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನೆ ಮಾಡಲು ಮೆ||ಚಂದ್ರಪ್ಪ ಅಂಡ್ ಕಂಪನಿ ಬಳ್ಳಾರಿ ಇವರನ್ನು ಭಾರತೀಯ ರಿಸರ್ವಬ್ಯಾಂಕ್ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಂ.ಎಸ್. ರೇಣುಕಾ ಸರನಾಡ ಮಲ್ಲಿಕಾರ್ಜುನಗೌಡರು ಮಾತನಾಡಿ 2022-23ನೇ ಸಾಲಿನಲ್ಲಿ 9 ನಿರ್ದೇಶಕರ ಮಂಡಳಿಯ ಸಭೆಗಳು ನಡೆದಿರುತ್ತವೆ ಎಲ್ಲಾ ಕಾರ್ಯಕ್ರಮಗಳಿಗೂ ಸುಗಮವಾಗಿ ನಡೆಯಲು ತಮ್ಮ ಅನುಭವ ಸಮಯವನ್ನು ನೀಡಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸಿದ ಎಲ್ಲಾ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು. ಜಿ.ವೀರೇಶ್ ನಿರ್ದೇಶಕ ಮಾತನಾಡಿ ಬ್ಯಾಂಕಿನ ವಸೂಲಾತಿ ಉತ್ತಮವಾಗಿದ್ದು ಸಾಲ ವಸೂಲಾತಿಯ ಉತ್ತಮ ಸಾಧನೆಗೆ ಕಾರ್ಯಕಾರಿ ಮಂಡಳಿಯವರ ಸಂಯೋಚಿತ ಮಾರ್ಗದರ್ಶನ ಬ್ಯಾಂಕಿನ ಸಿಬ್ಬಂದಿಯವರ ಅವಿರತ ಪರಿಶ್ರಮ ಹಾಗೂ ಸಮಯಕ್ಕೆ ಸರಿಯಾಗಿ ಸಾಲಮರುಪಾವತಿ ಮಾಡಿದ ಸದಸ್ಯರು ಕಾರಣ ಎಂದು ತಿಳಿಸಿದರು.
ನಿರ್ದೇಶಕ ಅಂಕಮನಾಳ್ ಮಯೂರ್ , ಕೆ.ಎಸ್. ನಿಖಿಲ್, ಮಾತನಾಡಿದರು. ಮಹಿಳಾ ನಿರ್ದೇಶಕರುಗಳಾದ ಬಂಡೇಮ್ಯಾಗಳ ಗಂಗಮ್ಮ, ಸುಮಿತ್ರಾ ಹೆಚ್. ಮಂಜುಳಾ ಜಿ.ಎಂ. ಅಲ್ಲದೆ ಕೆ.ಜೈ ಬಾಸ್ಕರ್ ಕೆ.ವೀರಪ್ಪ ನಾಗರಾಜ.ಜಿ. ಅಧಿಕಾರಿವರ್ಗದವರಾದ ವಿಜಯಲಕ್ಷ್ಮೀ ಮಳೇಮಠ, ಕುಮಾರ್, ಜಗದೀಶ್, ವಿಶ್ವನಾಥ, ಪೂಜಾ.ಬಿ. ರಾಮಚಂದ್ರ ಉಪಸ್ಥಿತರಿದ್ದರು. ವ್ಯವಸ್ಥಾಪಕ ಪ್ರಕಾಶ್.ಕೆ. ನಿರೂಪಿಸಿದರು, ಅಂಕಮನಾಳ್ ಕೊಟ್ರೇಶ್ ಸ್ವಾಗತಿಸಿದರು. ಕರೂರು ಮಹಾದೇವಪ್ಪ, ಕುಮಾರ್ ವಂದಿಸಿದರು., ಸುನೀಲ್ ಕುಮಾರ್ ಪ್ರಾರ್ಥಿಸಿದರು, ಮೇಘನಾ, ಸುನೀಲ್‍ಕುಮಾರ ತಂಡ ಪ್ರಾರ್ಥಿಸಿದರು, ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು,