ಎಸ್.ಡಿ.ಪಿ.ಐ. ದಿಂದ ಪ್ರತಿಭಟನೆ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಆ5: ಸಂಘ ಪರಿಹಾರ ಮತ್ತು ಬಿಜೆಪಿಗರು ದೇಶದಾದ್ಯಂತ ಅಶಾಂತಿ ಹರಡುತ್ತಿದ್ದಾರೆ ಎಂದು ಆರೋಪಿಸಿ ಸಂಘಪರಿವಾರದ ಅಟ್ಟಹಾಸವನ್ನು ಮಟ್ಟ ಹಾಕುವಂತೆ ಒತ್ತಾಯಿಸಿ ನಗರದಲ್ಲಿಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆ ನಡೆಸಿತು.
ಇಲ್ಲಿನ ಚೆನ್ನಮ್ಮ ವೃತ್ತದಿಂದ ತಹಶಿಲ್ದಾರರ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮುಂಬೈ ರೈಲಿನಲ್ಲಿ ಆರ್ ಪಿಎಫ್ ಯೋಧನಿಂದ ಹತ್ಯಾಕಾಂಡ, ಹರಿಯಾಣದಲ್ಲಿ ಮೌಲ್ವಿಯ ಕೊಲೆ, ಮಣಿಪುರದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ, ಬಿಜಾಪುರದಲ್ಲಿ ದಲಿತ ಮಹಿಳೆಯ ರೇಪ್ ಆ್ಯಂಡ್ ಮರ್ಡರ್, ವಿಟ್ಲದಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಸೇರಿದಂತೆ ಸಂಘಪರಿವಾರ ಹಾಗೂ ಬಿಜೆಪಿಗರು ಹಲ್ಲೆ, ಕೊಲೆ ನಡೆಸಿ ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಇದನ್ನು ಎಸ್.ಡಿ.ಪಿ.ಐ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ರಾಷ್ಟ್ರಪತಿಗಳು ಈ ಬಗ್ಗೆ ಗಮನ ಹರಿಸಿ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.