ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಎಸ್.ಬಿ ಕುಬೇರಪ್ಪ ಅಧಿಕಾರ ಸ್ವೀಕಾರ

ದಾವಣಗೆರೆ.ಜು.೩೧; ದಾವಣಗೆರೆ ನಗರದ ಸೀತಮ್ಮ ಬಾಲಕೀಯರ ಪ್ರೌಡಶಾಲೆಗೆ ಅವರಗೆರೆ ನಿವಾಸಿ ಎಸ್.ಬಿ. ಕುಬೇರಪ್ಪ ಇವರನ್ನ 2022-23 ನೇ ಸಾಲಿಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಇಂದು ಶಾಲೆಯಲ್ಲಿ ಅಧಿಕಾರ ಸ್ವೀಕಾರಿಸಿದರು.ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಛಾಯಾ ಎಸ್.ಕೆ. ತಂದೆಯವರಾದ ಎಸ್.ಬಿ ಕುಬೇರಪ್ಪ ನವರನ್ನು 2022-23 ನೇ ಸಾಲಿನ ಅದ್ಯಕ್ಷರನ್ನಾಗಿ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರ ನೇತೃತ್ವದ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿತ್ತು. ಈ ಹಿಂದೆ ಶಾಲೆಯ ಅದ್ಯಕ್ಷರಾಗಿದ್ದ ಕೆ.ಜಿ ಶಿವಕುಮಾರ್ ಅವರನ್ನ ಗೌರವ ಉಪ ಅದ್ಯಕ್ಷರನ್ನಾಗಿ ಮಾಡಲಾಗಿದ್ದು. ಅವರಿಂದ ಇಂದು ಕುಬೇರಪ್ಪನವರಿಗೆ ಎಸ್ ಡಿ ಎಂ ಸಿ ಅದ್ಯಕ್ಷರ ಅಧಿಕಾರವನ್ನ ಹಸ್ತಾಂತರ ಮಾಡಲಾಯಿತು. ಶಾಲೆಯ ಪ್ರಾಂಶುಪಾಲರು ಸಭಿಕರನ್ನ ಸ್ವಾಗತಿಸಿದರು.ಸದಸ್ಯರಾಗಿ  ನಾಗರಾಜ, ಬಿ.  ಮೋಹನ್ ಕುಮಾರ್,  ಮೊಹಮ್ಮದ್ ಇನಾಯಿತುಲ್ಲಾ, ಶ್ರೀಮತಿ ಚೈತ್ರಾ, ಶ್ರೀಮತಿ ಅಕ್ಷರಾ ಬಾನು, ಶ್ರೀಮತಿ ಶಾಹೀರ ಬಾನು, ಶ್ರೀಮತಿ ಶಾರದ ಎಂ. ತಳವಾರ, ಶ್ರೀಮತಿ ಕೊಟ್ರಮ್ಮ ಆಯ್ಕೆಯಾದರು.ಮಂಜಪ್ಪ ಎ.ಆರ್ ಉಪ ಪ್ರಾಂಶುಪಾಲರು, ಕಾರ್ಯದರ್ಶಿಗಳು, ಶ್ರೀಮತಿ ರುದ್ರಮ್ಮ ಹಿರಿಯ ಆರೋಗ್ಯ ಸಮಿತಿ, ಶ್ರೀಮತಿ ಲಕ್ಷ್ಮೀದೇವಿ ಹಾಗೂ ಮಾಜಿ ಮೇಯರ್ ಶ್ರೀ ವೀರೇಶ್‌, ಎಸ್.ಟಿ. ಇವರುಗಳನ್ನು ಪದನಿಮಿತ್ತ ಸದಸ್ಯರನ್ನಾಗಿ ಮಾಡಲಾಗಿದೆ.