ಎಸ್ ಡಿಪಿಐ, ಪಿಎಫ್ ಐ ಸಂಘಟನೆ ನಿಷೇಧ ಕೇಂದ್ರ ನಿರ್ಧರಿಸಲಿದೆ- ಈಶ್ವರಪ್ಪ

ಬೆಂಗಳೂರು, ಸೆ.22-ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸುವ ಅಗತ್ಯವಿದ್ದು, ಈ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್ .ಈಶ್ವರಪ್ಪ ತಿಳಿಸಿದ್ದಾರೆ.
ಎರಡು ಸಂಘಟನೆಗಳನ್ನು ನಿಷೇಧಿಸುವ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿರುವುದಾಗಿ ಅವರು ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಾಳಿ ವೇಳೆ ಸಿಕ್ಕಿರುವ ಉಗ್ರಾಮಿಗಳೆಲ್ಲರೂ ಮುಸಲ್ಮಾನರೆ.ಆದರೆ ಎಲ್ಲ ಮುಸಲ್ಮಾನರು ಭಯೋತ್ಪಾದಕರು ಎಂದು ನಾನು ಹೇಳುವುದಿಲ್ಲ ಎಂದರು.
ಉಗ್ರಗ್ರಾಮಿಗಳನ್ನು ಬೆಳಸಬೇಡಿ ಎಂಬುದಾಗಿ ನಾವು ಕಾಂಗ್ರೆಸ್​ಗೆ ಹೇಳುತ್ತಾ ಬಂದಿದ್ದೇವೆ. ಕಾಂಗ್ರೆಸ್​ ಈ ವಿಚಾರದಲ್ಲಿ ಗಮನ ಕೊಡದಿದ್ದರೆ ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಮೂರು ಮಂದಿ ಉಗ್ರಗಾಮಿಗಳು ಬಂಧನಕ್ಕೊಳಗಾದವರು ಬಿಜೆಪಿಯವರಾ? ಎಂದು ಪ್ರಶ್ನಿಸಿದರು.ಅವರಿಗೆ ಕುಮ್ಮಕ್ಕು ಕೊಟ್ಟಿದ್ದು ಯಾರು? ರಾಷ್ಟ್ರದ್ರೋಹಿಗಳೋ ಅಥವಾ ರಾಷ್ಟ್ರ ಭಕ್ತರೋ ಎನ್ನುವ ಮನಸ್ಥಿತಿ ಅರ್ಥವಾಗಬೇಕು ಎಂದು ತಿಳಿಸಿದರು.
ದೇಶದ್ರೋಹ ಮಾಡುವವರು ದೇಶ ಪ್ರೇಮಿಗಳ ಮೇಲೆ ಕಚ್ಚಾ ಬಾಂಬ್‌ ತಯಾರಿಸಿ ಎಸೆಯುತ್ತಾರೆ. ಇಲ್ಲಿ ನಾವು ಬಿಜೆಪಿ, ಜೆಡಿಎಸ್. ಕಾಂಗ್ರೆಸ್ ಅಂತ ಕಿತ್ತಾಡಬಾರದು. ಕೇವಲ ಮುಸಲ್ಮಾನರ ಮತಕ್ಕಾಗಿ ಕಿತ್ತಾಡಿದರೆ ರಾಷ್ಟ್ರ ದ್ರೋಹ ಕೆಲಸ ಮಾಡದಂತಾಗುತ್ತದೆ ಎಂದು ಈಶ್ವರಪ್ಪ ಹೇಳಿದರು.