ಎಸ್.ಟಿ.ವರ್ಗದ ರೈತರಿಗೆ ಪಂಪ್ ಸೆಟ್ ಮತ್ತು ಪೂರಕ ಸಾಮಾಗ್ರಿಗಳ ವಿತರಣೆ


ತೆಕ್ಕಲಕೋಟೆ: ಪಟ್ಟಣದ ಕಾಡಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪಟ್ಟಣದ ಪರಿಶಿಷ್ಟ ವರ್ಗಗಳ ರೈತರಿಗೆ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಪಂಪಸೆಟ್ ವಿತರಣಾ ಕಾರ್ಯಕ್ರಮವನ್ನು ‌ಶಾಸಕ ಎಂ.ಎಸ್. ಸೋಮಲಿಂಗಪ್ಪ ಗಿಡಕ್ಕೆ ನೀರು ಹಾಕುವುದರ ಮೂಲಕ  ಉದ್ಘಾಟಿಸಿದರು.
ನಂತರ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ,2019-20ನೇ ಹಾಗೂ  2020-21ನೇ ಸಾಲಿನ ಗಂಗಾ ಕಲ್ಯಾಣಿ ಯೋಜನೆ ಅಡಿಯಲ್ಲಿ ಕೊರೆದ ಕೊಳವೆ ಬಾವಿಗಳಿಗೆ ಪಂಪಸೆಟ್ ಮತ್ತು ಪೂರಕ ಸಾಮಗ್ರಿಗಳನ್ನು ಸಿರಿಗೇರಿ ಗ್ರಾಮದ ಮಂಗಳಮುಖಿ ಸೌಮ್ಯ ಸೇರಿದಂತೆ 48 ಜನ ರೈತ ಫಲನುಭವಿಗಳಿಗೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ವಿತರಣೆ ಮಾಡಿದರು.
 ಎಸ್.ಟಿ. ನಿಗಮದ ಎಚ್ .ಮಲ್ಲಿಕಾರ್ಜನ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಚ್ ನೀಲಮ್ಮ ಎಚ್.ಕೆ ತಿಮ್ಮಪ್ಪ, ಭೂ ನ್ಯಾಯ ಮಂಡಳಿ ಸದಸ್ಯ ಗಂಗಪ್ಪ,ಪ.ಪಂ. ಮಾಜಿ ಅಧ್ಯಕ್ಷ ಸಿದ್ದಪ್ಪ, ಪ.ಪಂ ಸದಸ್ಯರುಗಳಾದ ದೇವಣ್ಣ,ಅಳಿಮಾಳ್ಳಿ ಹುಸೇನಿ,  ಕೊಮರೆಪ್ಪ, ಮಂಜುನಾಥ, ಮಾರುತಿ, ಸಿಂಗ್ರಿ ಸಿದ್ದಯ್ಯ, ಮುಖಂಡರಾದ ಲಕ್ಷ್ಮಣ ರಾವ್ ,ನೇಣಿಕಪ್ಪ, ರೈತರು ಇದ್ದರು.